Shimoga, ಫೆಬ್ರವರಿ 25 -- Indian Railways: ಹುಬ್ಬಳ್ಳಿ ಕೇಂದ್ರಿತ ನೈಋತ್ಯ ರೈಲ್ವೆಯು ಮೈಸೂರು-ತಾಳಗುಪ್ಪ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು-ತಾಳಗುಪ್ಪ ನಡುವಿನ ಎಕ್ಸ್‌ಪ್ರೆಸ್‌ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯ ಅವಕಾಶವನ್ನು ಮುಂದುವರಿಸಲಾಗಿದೆ. ಈಗಾಗಲೇ ಒಂದು ವರ್ಷದಿಂದಲೂ ಈ ಎರಡೂ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಹಾಗೂ ಶಿವಮೊಗ್ಗ ತಾಲ್ಲೂಕಿನ ಕುಂಸಿಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತಿರುವುದರಿಂದ ಈ ಸೇವೆ ಮುಂದುವರೆಸಲಾಗಿದೆ. ಅರಸಾಳು ಗ್ರಾಮ ಕನ್ನಡದ ಪ್ರಮುಖ ಧಾರಾವಾಹಿಯಾಗಿ ಗಮನ ಸೆಳೆದ ಮಾಲ್ಗುಡಿ ಡೇಸ್‌ ಚಿತ್ರೀಕರಣವಾದ ಊರು. ಈಗಲೂ ಈ ನಿಲ್ದಾಣಕ್ಕೆ ಮಾಲ್ಗುಡಿ ಡೇಸ್‌ ನಿಲ್ದಾಣ ಎಂದೇ ಹೆಸರಿಡಲಾಗಿದೆ.

1. ರೈಲು ಸಂಖ್ಯೆ 16227/16228 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್...