Mysuru, ಏಪ್ರಿಲ್ 6 -- Indian Railways: ಈಗಾಗಲೇ ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಿಂದ ಭಾರತದ ನಾನಾ ರಾಜ್ಯಗಳ ಪ್ರಮುಖ ನಗರಗಳಿಗೆ ಬೇಸಿಗೆ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. ಮುಂಬೈ ಸಹಿತ ಪ್ರಮುಖ ನಗರಗಳಿಗೆ ರೈಲು ಸಂಚಾರ ಶುರುವಾಗಿದೆ.ಬೇಸಿಗೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸಲು, ನೈಋತ್ಯ ರೈಲ್ವೆ ಮೈಸೂರು - ದರ್ಬಂಗಾ ನಡುವೆ 10 ಟ್ರಿಪ್‌ಗಳಿಗೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಿದೆ. ಬುಕಿಂಗ್ ಮತ್ತು ಆಗಮನ/ನಿರ್ಗಮನ ಸಮಯಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರೈಲ್ವೆ ಬುಕಿಂಗ್ ಕೌಂಟರ್‌ಗಳನ್ನು ಸಂಪರ್ಕಿಸಬಹುದು.ರೈಲು ಸೇವೆಗಳ ವಿವರಗಳು ಹೀಗಿವೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

ರೈಲು ಸಂಖ್ಯೆ 06211/06212 ಮೈಸೂರು - ದರ್ಬಂಗಾ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ (ಪ್ರತಿ ದಿಕ್ಕಿನಲ್ಲಿ 10 ಟ್ರಿಪ್‌ಗಳು):

ರ...