ಭಾರತ, ಏಪ್ರಿಲ್ 4 -- Indian Railways: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆಯು ಬೇಸಿಗೆ ಹಿನ್ನೆಲೆಯಲ್ಲಿ ವಿಶೇಷ ರೈಲುಗಳ ಸಂಚಾರವನ್ನು ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳಲ್ಲಿ ಆರಂಭಿಸಲಿದೆ. ವಿಶೇಷವಾಗಿ ಹುಬ್ಬಳ್ಳಿಯಿಂದ ಎರಡು ಹಾಗೂ ಮೈಸೂರಿನಿಂದ ಒಂದು ರೈಲು ಸಂಚಾರವನ್ನು ಆರಂಭಿಸಲಿದೆ. ಹುಬ್ಬಳ್ಳಿ - ಬನಾರಸ್- ಹುಬ್ಬಳ್ಳಿ ನಿಲ್ದಾಣಗಳ ನಡುವೆ 06 ಟ್ರಿಪ್ ವಿಶೇಷ ರೈಲು ,ಹುಬ್ಬಳ್ಳಿ-ಮುಜಾಫರ್‌ಪುರ - ಹುಬ್ಬಳ್ಳಿ ನಿಲ್ದಾಣಗಳ ನಡುವೆ 08 ಟ್ರಿಪ್ ಹಾಗೂ ಮೈಸೂರು-ಭಗತ್-ಕಿ-ಕೋಥಿ-ಮೈಸೂರು ಬೇಸಿಗೆಯ ಎಕ್ಸ್‌ಪ್ರೆಸ್‌ ವಿಶೇಷ 08 ಟ್ರಿಪ್ ಗಳು ಇರಲಿವೆ. ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ರೈಲು ಸಂಖ್ಯೆ...