Bangalore, ಮಾರ್ಚ್ 3 -- Indian Railways: ಬೆಂಗಳೂರು ಪೂರ್ವ ನಿಲ್ದಾಣವನ್ನು ಮಾರ್ಚ್ 2025 ರಿಂದ ಪ್ರಯಾಣಿಕರ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ಪ್ರಸ್ತುತ ಅಪ್ ಮತ್ತು ಡೌನ್ ಲೈನ್ ಪ್ಲಾಟ್ಫಾರ್ಮ್ಗಳನ್ನು ತೆಗೆದುಹಾಕಿ ಮೂರನೇ ಮತ್ತು ನಾಲ್ಕನೇ ಮಾರ್ಗಗಳಿಗೆ ಹೊಸ ಹಳಿಗಳನ್ನು ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಿಂದಾಗಿ, ಮಾರ್ಚ್ 13, 2025 ರಿಂದ ಮುಂದಿನ ಸೂಚನೆಯವರೆಗೆ ಒಟ್ಟು 41 ರೈಲುಗಳ ನಿಲುಗಡೆಗಳನ್ನು ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಬೆಂಗಳೂರು ಪೂರ್ವ ನಿಲ್ದಾಣದಲ್ಲಿ ಒಟ್ಟು 41 ರೈಲುಗಳು (15 ಎಕ್ಸ್ ಪ್ರೆಸ್ ರೈಲುಗಳು ಮತ್ತು 26 ಪ್ಯಾಸೆಂಜರ್/ಮೆಮು ರೈಲುಗಳು) ನಿಲುಗಡೆಯಾಗುವುದಿಲ್ಲ ನೈರುತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

ನಿಲುಗಡೆ ರದ್ದಾಗಲಿರುವ ರೈಲುಗಳ ವಿವರ ಹೀಗಿದೆ.

1. ರೈಲು ಸಂಖ್ಯೆ 16522 ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ

2. ರೈಲು ಸಂಖ...