Cuttack, ಮಾರ್ಚ್ 30 -- Indian Railways: ಬೆಂಗಳೂರಿನಿಂದ ಅಸ್ಸಾಂನ ಕಾಮಾಕ್ಯಕ್ಕೆ ಹೊರಟಿದ್ದ ಬೆಂಗಳೂರು ಕಾಮಾಕ್ಯ ಎಕ್ಸ್‌ಪ್ರೆಸ್‌ ರೈಲು ಭಾನುವಾರ ಮಧ್ಯಾಹ್ನ ಒಡಿಶಾದಲ್ಲಿ ಹಳಿ ತಪ್ಪಿದ ಪರಿಣಾಮ ಏಳು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಕಟಕ್‌ ಜಿಲ್ಲೆಯಲ್ಲಿ ರೈಲಿನ ಹನ್ನೊಂದು ಬೋಗಿಗಳು ಹಳಿಯಿಂದ ವಾಲಿವೆ.ಬೆಳಿಗ್ಗೆ 11.54 ಕ್ಕೆ ಒಡಿಶಾದ ಕಟಕ್‌ ಜಿಲ್ಲೆಯ ಮಂಗುಲಿ ಬಳಿಯ ನಿರ್ಗುಂಡಿಯಲ್ಲಿ ಎಸ್‌ಎಂವಿಟಿ ಬೆಂಗಳೂರು-ಕಾಮಾಕ್ಯ ಎಸಿ ಎಕ್ಸ್‌ಪ್ರೆಸ್‌ನ ಹನ್ನೊಂದು ಬೋಗಿಗಳು ಹಳಿತಪ್ಪಿದವು ಎಂದು ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಅಶೋಕ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಒಡಿಶಾ ಅಗ್ನಿಶಾಮಕ ಸೇವೆಯ ಮಹಾನಿರ್ದೇಶಕ ಸುಧಾಂಶು ಸಾರಂಗಿ ಅವರು ಗಾಯಗೊಂಡ ಏಳು ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರ ಗರಿಷ್ಠ ಸಂಖ್ಯೆ 10 ಕ್ಕಿಂತ ಹೆಚ್ಚಿರಬಾರದು" ಎಂದು ಅವರು ಹೇಳಿದರು.

ರೈಲು ಬೆಂಗಳೂರಿನಿಂದ ಅಸ್ಸಾಂನ ಗುವಾಹಟಿಯ ಕಾಮಾಕ್ಯ ನಿಲ್ದಾಣಕ...