ಭಾರತ, ಏಪ್ರಿಲ್ 22 -- ಬೆಂಗಳೂರು ಹಾಗೂ ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಸಂಚರಿಸುತ್ತಿದ್ದ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್‌ ರೈಲಿನ ಸೇವೆಯನ್ನು ಯಥಾರೀತಿಯಾಗಿ ಆರಂಭಿಸಲಾಗುತ್ತಿದೆ. ಚೆನ್ನೈ ವಿಭಾಗದಲ್ಲಿ ಸುರಕ್ಷತೆ ಮತ್ತು ನಿರ್ವಹಣಾ ಕಾರ್ಯಗಳಿಂದಾಗಿ ಈ ಹಿಂದೆ ಭಾಗಶಃ ರದ್ದಾದ ರೈಲು ಸೇವೆಗಳನ್ನು ಪುನಃಸ್ಥಾಪನೆ ಮಾಡುವುದಾಗಿ ದಕ್ಷಿಣ ರೈಲ್ವೆ ತಿಳಿಸಿದೆ. ಈ ರೈಲುಗಳು ಈಗ ಅವುಗಳ ಮೂಲ ವೇಳಾಪಟ್ಟಿಯ ಪ್ರಕಾರ ಚಲಿಸುತ್ತವೆ. ಬೇಸಿಗೆ ರಜೆ ಸೇರಿದಂತೆ ನಾನಾ ಕಾರಣಗಳಿಂದ ಮೈಸೂರು ಹಾಗೂ ಬೆಂಗಳೂರು ಭಾಗದಿಂದ ತಮಿಳುನಾಡು ಹಾಗೂ ಚೆನ್ನೈ ಕಡೆಗೆ ಸಂಚರಿಸುವವರು ಈ ಸಮಯವನ್ನು ಗಮನಿಸುವಂತೆ ಹುಬ್ಬಳ್ಳಿ ನೈಋತ್ಯ ರೈಲ್ವೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1. ರೈಲು ಸಂಖ್ಯೆ 16552 ಅಶೋಕಪುರಂ - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ .2025ರ ಏಪ್ರಿಲ್‌ 23 ಮತ್ತು ಏಪ್ರಿಲ್‌ 25 ರಂದು ಪ್ರಾರಂಭವಾಗುವ ಪ್ರಯಾಣವನ್...