Bengaluru, ಏಪ್ರಿಲ್ 8 -- Indian Railways: ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗವು ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ನಿಯಂತ್ರಿಸಿದ್ದು, ಇನ್ನಷ್ಟು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಬಂಗಾರಪೇಟೆ ಬೆಂಗಳೂರು ಮೆಮು, ವೈಟ್‌ಫೀಲ್ಡ್‌ ಬೆಂಗಳೂರು ರೈಲು, ಮೈಸೂರು ಬೆಂಗಳೂರು ನಡುವಿನ ಪ್ಯಾಸೆಂಜರ್‌ ರೈಲು, ಲೋಕಮಾನ್ಯ ತಿಲಕ್ ಟರ್ಮಿನಸ್ - ಕೊಯಮತ್ತೂರು ಡೈಲಿ ಎಕ್ಸ್‌ಪ್ರೆಸ್, ಮುಂಬೈ - ಕೆಎಸ್‌ಆರ್ ಬೆಂಗಳೂರು, ನಾಂದೇಡ್‌- ಕೆಎಸ್‌ಆರ್ ಬೆಂಗಳೂರು, ಹುಬ್ಬಳ್ಳಿ - ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸಹಿತ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಹಿತಿ ಪಡೆಯಬಹುದು ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಮುಖ್ಯವಾಗಿ ವೈಟ್‌ಫೀಲ್ಡ್-ಕೃಷ್ಣರಾಜಪುರಂ ನಿಲ್ದಾಣಗಳ ನಡುವಿನ ಸೇತುವೆ ಕೆಲಸ (ಸೇತುವೆ ಸಂಖ್ಯೆ.834) ಕಾ...