Tumkur, ಫೆಬ್ರವರಿ 6 -- ಬೆಂಗಳೂರು: ಕರ್ನಾಟಕದ ತುಮಕೂರು ಸೇರಿದಂತೆ ಹಲವು ರೈಲ್ವೆ ನಿಲ್ದಾಣಗಳು ಹೈಟೆಕ್‌ ಆಗಲಿವೆ. ಇದಕ್ಕಾಗಿ ಸಾಕಷ್ಟು ಅನುದಾನವನ್ನೂ ಈ ಬಾರಿ ಒದಗಿಸಲಾಗಿದೆ. ಅದರಲ್ಲೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿರುವುದರಿಂದ ತುಮಕೂರು ರೈಲ್ವೆ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ದಿಪಡಿಸಲು ಮುಂದಾಗಿದ್ದಾರೆ. ಆಂಧ್ರದೊಂದಿಗೆ ತುಮಕೂರಿಗೆ ಸಂಪರ್ಕ ಕಲ್ಪಿಸಿ ಇದನ್ನು ಜಂಕ್ಷನ್‌ ಆಗಿ ರೂಪಿಸಬೇಕು. ಬೆಂಗಳೂರು ನಂತರದ ಪ್ರಮುಖ ರೈಲ್ವೆ ನಿಲ್ದಾಣವಾಗಿ ಅಭಿವೃದ್ದಿಪಡಿಸುವ ಇರಾದೆ ಸೋಮಣ್ಣ ಅವರದ್ದು. ಪ್ರಸ್ತುತ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ತುಮಕೂರು ನಿಲ್ದಾಣವನ್ನು 88 ಕೋಟಿ ರೂ.ಗಳ ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುವುದು ಮತ್ತು ಟೆಂಡರ್ ಪ್ರಾರಂಭವನ್ನು 2025 ರ ಮಾರ್ಚ್‌ 31ಕ್ಕೆ ನಿಗದಿಪಡಿಸಲಾಗಿದೆ.

ಈಗಾಗಲೇ ತುಮಕೂರು ನಗರದಲ್ಲಿ ವಂದೇ ಭಾರತ್‌ ನಿಲುಗಡೆಗೂ ಅವಕಾಶ ಮಾಡಿಕೊಡಲಾಗಿದೆ. ಅಲ್ಲದೇ ತುಮಕೂರು-ಚಿತ್ರದುರ್ಗ- ದಾವಣಗೆರೆ ರೈಲ...