Hubli, ಮಾರ್ಚ್ 1 -- Indian Railways: ಕರ್ನಾಟಕ ಕೇಂದ್ರಿತ ಹುಬ್ಬಳ್ಳಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಮುಕುಲ್ ಸರನ್ ಮಾಥೂರ್ ಅವರು 2025 ರ ಮಾರ್ಚ್ 1 ರಂದು ನೈಋತ್ಯ ರೈಲ್ವೆಯ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಅಧಿಕಾರ ವಹಿಸಿಕೊಂಡರು. ಅವರು 1988 ರ ಬ್ಯಾಚಿನ ಭಾರತೀಯ ರೈಲ್ವೆ ಸಂಚಾರ ಅಧಿಕಾರಿಯಾಗಿದ್ದು, ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಗುರ್ಗಾಂವ್ನ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ನಿಂದ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಪ್ರಸ್ತುತ ನೇಮಕಕ್ಕೆ ಸೇರುವ ಮೊದಲು, ಅವರು ರೈಲ್ವೆ ಮಂಡಳಿಯ ಹೆಚ್ಚುವರಿ ವಾಣಿಜ್ಯ ಸದಸ್ಯರಾಗಿದ್ದರು. ಮೂರು ದಶಕಗಳಿಂದ ತಮ್ಮ ವೃತ್ತಿಜೀವನದಲ್ಲಿ, ಅವರು ಕೇಂದ್ರ ರೈಲ್ವೆ, ಉತ್ತರ ರೈಲ್ವೆ, ಪೂರ್ವ ಕರಾವಳಿ ರೈಲ್ವೆ, ಪಶ್ಚಿಮ ಮಧ್ಯ ರೈಲ್ವೆ ಮತ್ತು ರೈಲ್ವೆ ಮಂಡಳಿಯ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಹೆಚ್ಚಿನ ಕಾರ್ಯಕ್ಷಮತೆಗಳಲ್ಲಿ ಅವರು ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕರು/ಇನ್ಫ್ರಾಸ್ಟ್ರಕ...