Hubli, ಏಪ್ರಿಲ್ 2 -- Indian Railways: ಹುಬ್ಬಳ್ಳಿ ಕೇಂದ್ರಿತ ಕರ್ನಾಟಕದ ಬಹುತೇಕ ವ್ಯಾಪ್ತಿ ಹೊಂದಿರುವ ನೈಋತ್ಯ ರೈಲ್ವೆ 2024-25ರ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ, ಆದಾಯ ಉತ್ಪಾದನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದೆ. ಆರ್ಥಿಕ ಕಾರ್ಯಕ್ಷಮತೆಯಲ್ಲಿ ವಿವಿಧ ಆದಾಯಗಳ ಮೂಲಕ ಗಣನೀಯ ಬೆಳವಣಿಗೆಯನ್ನು ಸಾಧಿಸಿರುವ ನೈಋತ್ಯ ರೈಲ್ವೆ, ಪ್ರಯಾಣಿಕರ ಆದಾಯವನ್ನು 3,172.82 ಕೋಟಿ ರೂಪಾಯಿಗೆ ಹೆಚ್ಚಿಸಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಆದಾಯಯು 3,090.5 ಕೋಟಿ ರೂಪಾಯಿಯಾಗಿತ್ತು. ಇತರ ಕೋಚಿಂಗ್ ಆದಾಯವು 328.26 ಕೋಟಿ ರೂಪಾಯಿಯಿಂದ 335.24 ಕೋಟಿಗೆ ಏರಿದ್ದು , ಪಾರ್ಸೆಲ್ ಆದಾಯವು ಕಳೆದ ವರ್ಷ 157.77 ಕೋಟಿ ರೂಪಾಯಿಯಾಗಿದ್ದರೆ, ಈ ವರ್ಷ 166.6 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಒಟ್ಟು ಆದಾಯ 8,340.90 ಕೋಟಿ ರೂಪಾಯಿಗೆ ತಲುಪಿದ್ದು, ಇದು ನೈಋತ್ಯ ರೈಲ್ವೆಯ ಬಲವಾದ ಆರ್ಥಿಕ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ವಾಣಿಜ್ಯ ಆದಾಯವೂ ಮಹತ್ತರ ಏರಿಕೆ ಕಂಡಿದ್ದು, 2023-24ರ 78.90...