Bangalore, ಫೆಬ್ರವರಿ 1 -- Indian Railways: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕಕ್ಕ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ ಎನ್ನುವ ಚರ್ಚೆಗಳು ನಡೆದಿವೆ. ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹಿಂದಿನ ವರ್ಷದಂತೆಯೇ ಅನುದಾನ ದೊರೆತಿದೆ. ಹೆಚ್ಚುವರಿಯಾಗಿ ಅನುದಾನವೇನೂ ಕರ್ನಾಟಕಕ್ಕೆ ಲಭಿಸಿಲ್ಲ. ಈಗಾಗಲೇ ಜಾರಿಯಲ್ಲಿರುವ ಹಲವಾರು ರೈಲ್ವೆ ಯೋಜನೆಗಳಿಗೆ ಈ ಬಾರಿಯೂ ಅನುದಾನವನ್ನುಒದಗಿಸಲಾಗಿದೆ. ಇದರಿಂದ ಕರ್ನಾಟಕದ ರೈಲ್ವೆ ಸಂಪರ್ಕ ಜಾಲ ವಿಸ್ತರಣೆ ಮಾಡಬೇಕು ಎನ್ನುವ ಬೇಡಿಕೆಗೆ ಒತ್ತು ಸಿಕ್ಕಿದೆ. ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕೊಂಚ ಕಡಿಮೆಯೇ ಅನುದಾನ ಸಿಕ್ಕಿದೆ. ಈ ಬಾರಿ ಕರ್ನಾಟಕಕ್ಕೆ 7564 ಕೋಟಿ ನೀಡಲಾಗಿದೆ. ಎರಡು ವರ್ಷದಿಂದ ಪ್ರಗತಿಯಲ್ಲಿರುವ ಬೆಂಗಳೂರು ಸಬ್ ಅರ್ಬನ್ ರೈಲ್ವೆಗೆ ಕಳೆದ ಬಾರಿ 350 ಕೋಟಿ. ರೂ. ಒದಗಿಸಲಾಗಿದೆ.

ಕಳೆದ ಬಾರಿ ಕರ್ನಾಟಕಕ್ಕೆ ರೈಲ್ವೆ ಬಜೆಟ್ ರೂ.7559 ಕೋಟಿ ಇತ್ತು, ಈ ಬಾರಿ ಕರ್ನಾಟಕಕ್ಕೆ ರೇಲ್ವೆ ಬಜೆಟ್ ರೂ...