Hubli, ಜನವರಿ 26 -- ಬೆಂಗಳೂರು: ಜನವರಿ ಒಂದರಿಂದಲೇ ಜಾರಿಯಾಗುವಂತೆ ಸ್ಥಳೀಯ ರೈಲಯಗಳ ಸಂಖ್ಯೆಯಲ್ಲಿ ಮಾಡಿದ್ದ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಈಗ ಇನ್ನಷ್ಟು ಪ್ರಮುಖ ರೈಲುಗಳ ಸಂಖ್ಯೆಗಳಲ್ಲಿ ಬದಲಾವಣೆ ಮಾಡಲಿದೆ. ಇದು 2025ರ ಮಾರ್ಚ್‌ ತಿಂಗಳಲ್ಲಿ ಜಾರಿಗೆ ಬರಲಿದೆ. ಮುಖ್ಯವಾಗಿ ಮೈಸೂರು ಹಾಗೂ ಚೆನ್ನೈ ನಡುವಿನ ಎಕ್ಸ್‌ಪ್ರೆಸ್‌ ರೈಲು. ಯಶವಂತಪುರ ತಿರುವನಂತಪುರಂ, ಹುಬ್ಬಳ್ಳಿ ಹಾಗೂ ಚೆನ್ನೈ ಎಕ್ಸ್‌ ಪ್ರೆಸ್‌ ಸೇರಿ ಒಟ್ಟು ಆರು ರೈಲುಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದ್ದು. ಪ್ರಯಾಣಿಕರು ಗಮನಿಸಬೇಕು ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೈರುತ್ಯ ರೈಲ್ವೆಯು ಈ ಕೆಳಗಿನ ರೈಲುಗಳಿಗೆ ರೈಲು ಸಂಖ್ಯೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಬದಲಾವಣೆಗಳು ಮಾರ್ಚ್ 2025 ರಿಂದ ಜಾರಿಗೆ ಬರಲಿವೆ. ಈ ರೈಲುಗಳ ಅಸ್ತಿತ್ವದಲ್ಲಿರುವ ಸಮಯ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಎಂದು ತಿಳಿಸಲಾಗಿದ...