Bangalore, ಜನವರಿ 30 -- ಬೆಂಗಳೂರು: ಚೀನಾದ ಡೀಪ್‌ಸೀಕ್‌ ಎಐ ಆಗಮನದ ಬಳಿಕ ಜಾಗತಿಕವಾಗಿ ಎಐ ರೇಸ್‌ ಆರಂಭವಾಗಿದೆ. ಇದೇ ಸಮಯದಲ್ಲಿ ಭಾರತವೂ ಎಐ ಮಾದರಿ ಅಭಿವೃದ್ಧಿಪಡಿಸುವ ಮಹಾತ್ವಕಾಂಕ್ಷೆಯ ಮಾತುಗಳನ್ನು ಆಡಿದೆ. ಭಾರತದಿಂದಲೂ ಡೀಪ್‌ಸೀಕ್‌, ಚಾಟ್‌ಜಿಪಿಟಿ, ಜೆಮಿನಿ ಪ್ರತಿಸ್ಪರ್ಧಿ ಎಐ ಅಭಿವೃದ್ಧಿ ಕುರಿತು ಐಟಿ ಸಚಿವ ಅಶ್ವಿನಿ ವೈಷ್ಣವ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಾಟ್‌ಜಿಪಿಟಿ, ಡೀಪ್‌ಸೀಕ್ ಆರ್1 ಮತ್ತು ಇತರೆ ಎಐ ಶಕ್ತಿಗಳಿಗೆ ಎದುರಾಗಿ ತನ್ನದೇ ಆದ 'ಫೌಂಡೇಶನಲ್ ಮಾದರಿʼಯನ್ನು ನಿರ್ಮಿಸುವ ಯೋಜನೆಯನ್ನು ಭಾರತ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಆಪಲ್‌ನ ಆಪ್‌ಸ್ಟೋರ್‌ನಲ್ಲಿ ಚಾಟ್‌ಜಿಪಿಟಿಯನ್ನು ಚೀನಾದ ಡೀಪ್‌ಸೀಕ್‌ ಎಐ ಹಿಂದಿಕ್ಕಿ ಮೊದಲ ಸ್ಥಾನ ಪಡೆದು ಉತ್ತಮ ರೇಟಿಂಗ್‌ನ ಉಚಿತ ಅಪ್ಲಿಕೇಶನ್ ಆಗಿ ಹೊರಹೊಮ್ಮಿದ ಬಳಿಕ ಭಾರತ ಈ ಪ್ರತಿಕ್ರಿಯೆ ನೀಡಿದೆ. ಸಿಲಿಕಾನ್ ವ್ಯಾಲಿಯ ಓಪನ್ ಎಐ ಪ್ರಾಬಲ್ಯಕ್ಕೆ ಭಾರತವೂ ಸೆಡ್ಡು ಹೊಡೆಯುವ ನಿರೀಕ್ಷೆಯಿದೆ.

"ಭಾರತವು ವಿಶ್ವದರ್ಜೆಯ ಫೌಂಡೇಶನಲ್‌ ಮಾದರಿಯನ್ನು ನಿರ್ಮ...