ಭಾರತ, ಜನವರಿ 28 -- Income Tax Slabs: ಕೇಂದ್ರ ಬಜೆಟ್ 2025-26ರ ಮಂಡನೆಗೆ ದಿನಗಣನೆ ಶುರುವಾಗಿರುವ ಹೊತ್ತು. ಫೆ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಆದಾಯ ತೆರಿಗೆ ಸ್ಲ್ಯಾಬ್‌, ತೆರಿಗೆ ವಿನಾಯಿತಿ ವಿಚಾರಗಳು ಹೆಚ್ಚು ಚರ್ಚೆಯಲ್ಲಿವೆ. ಕೇಂದ್ರ ಬಜೆಟ್ 2024-25 ಮಂಡಿಸುವಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಬದಲಾವಣೆಗಳನ್ನು ನೆನಪುಮಾಡಿಕೊಳ್ಳುವುದಕ್ಕೆ ಈ ಹೊತ್ತು ಒಂದು ನಿಮಿತ್ತ. ಹೊಸ ಆದಾಯ ತೆರಿಗೆ ವ್ಯವಸ್ಥೆ ಮತ್ತು ಹಳೆ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸ್ಲ್ಯಾಬ್‌ಗಳ ಹಂಚಿಕೆ ಮತ್ತು ಪೂರಕ ವಿವರಗಳನ್ನು ಗಮನಿಸೋಣ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಜುಲೈ 23 ರಂದು ಕೇಂದ್ರ ಬಜೆಟ್ 2024-25 ಮಂಡಿಸುವಾಗ, ತೆರಿಗೆ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆ ಘೋಷಿಸಿದರು. ಹೊಸ ತೆರಿಗೆ ಆಡಳಿತ ವ್ಯವಸ್ತೆಯಲ್ಲಿ ತೆರಿಗೆದಾರರಿಗೆ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್‌) ಹೆಚ್ಚಳ ಪ್ರಕಟಿಸಿದರು. ಮಧ್ಯ...