ಭಾರತ, ಫೆಬ್ರವರಿ 1 -- ಬೆಂಗಳೂರು: ನಿರ್ಮಲಾ ಸೀತಾರಾಮನ್‌ ಕೇಂದ್ರ ಬಜೆಟ್‌ 2025 ಮಂಡನೆ ಮಾಡುವ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಆದಾಯ ತೆರಿಗೆಗೆ ಸಂಬಂಧಪಟ್ಟ ಪೋಸ್ಟ್‌ಗಳು ಟ್ರೆಂಡಿಂಗ್‌ ಆಗುತ್ತಿವೆ. ಜನ ಸಾಮಾನ್ಯರು, ವೇತನ ಪಡೆಯುವವರು ತಮ್ಮ ಆದಾಯದಲ್ಲಿ ಬಹುಪಾಲು ತೆರಿಗೆ ಕಟ್ಟುತ್ತಿದ್ದೇವೆ ಎಂದು ಪೋಸ್ಟ್‌ ಮಾಡುತ್ತಿದ್ದಾರೆ. ತಮ್ಮ ವೇತನ ಇಷ್ಟು ಇದೆ, ಇದರಲ್ಲಿ ಇಂತಿಷ್ಟು ತೆರಿಗೆ ಕಟ್ಟುತ್ತೇವೆ. ಉಳಿದ ವೇತನದಲ್ಲಿ ಕಾರು ಖರೀದಿಸಿದರೆ ಮತ್ತೆ ತೆರಿಗೆ ಕಟ್ಟುತ್ತೇವೆ. ಐಸ್‌ಕ್ರೀಮ್‌ ಖರೀದಿಸಿದರೂ ತೆರಿಗೆ ಪಾವತಿಸಬೇಕು ಎಂದೆಲ್ಲ ಪೋಸ್ಟ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ತಮ್ಮ ತೆರಿಗೆ ಗೋಳು ತೋಡಿಕೊಳ್ಳುತ್ತಿದ್ದಾರೆ. ಇಂದು ಮಂಡನೆಯಾಗುವ ಬಜೆಟ್‌ನಲ್ಲಿ ತೆರಿಗೆದಾರರ ಗೋಳಿಗೆ ಪರಿಹಾರ ಇರಬಹುದೇ ಎಂದು ಕಾದು ನೋಡಬೇಕಿದೆ.

ಎಕ್ಸ್‌ನಲ್ಲಿ ನೀರಜ್‌ ಎಂಬವರು ಈ ರೀತಿ ಪೋಸ್ಟ್‌ ಮಾಡಿದ್ದಾರೆ. "ನನ್ನ ಒಟ್ಟು ಆದಾಯ 30 ಲಕ್ಷ ರೂಪಾಯಿ. ಇದಕ್ಕೆ 6,24,000 ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದೇ...