ಭಾರತ, ಫೆಬ್ರವರಿ 1 -- ಪ್ರತಿ ವರ್ಷ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ಹಣಕಾಸು ಸಚಿವರು ಏನು ಹೇಳುತ್ತಾರೆ ಎನ್ನುವ ಬಗ್ಗೆ ತಿಳಿಯಲು ಇಡೀ ದೇಶ ಕಾತರದಿಂದ ಕಾಯುತ್ತಿರುತ್ತದೆ. ಈ ವರ್ಷ ಈ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿತ್ತು. ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ಕುರಿತು ವಿತ್ತ ಸಚಿವರು ಹೆಚ್ಚೇನೂ ಮಾಹಿತಿ ನೀಡಿಲ್ಲ. ಆದರೆ ಮುಂದಿನ ವಾರದಲ್ಲಿ ಆದಾಯ ತೆರಿಗೆ ಕುರಿತು ಹೊಸ ವಿಧೇಯಕ ಮಂಡಿಸಲಾಗುವುದು. ಆದಾಯ ತೆರಿಗೆಯ ಹೊಸ ನಿಯಮ ಘೋಷಿಸಲಾಗುವುದು. ಮುಂದಿನ ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಜನರನ್ನು ಮೊದಲು ನಂಬುತ್ತಾರೆ. ನಂತರ ಅಪ್‌ಡೇಟ್ ಆಗಿರುವ ಮಾಹಿತಿಗಳನ್ನು ಪರಿಶೀಲಿಸಲಿದ್ದಾರೆ ಎಂದು ಭರವಸೆ ನೀಡಿದರು. ಬಜೆಟ್ ಭಾಷಣದ ಈ ಘೋ‍ಷಣೆಯು ಆದಾಯ ತೆರಿಗೆ ನಿಯಮಗಳ ಸುಧಾರಣೆ ಮತ್ತು ಸರ್ಕಾರಕ್ಕೆ ಪ್ರಮುಖ ಆದಾಯ ಮೂಲವಾಗಿರುವ ಆದಾಯ ತೆರಿಗೆ ಸಂಗ್ರಹ ದೃಷ್ಟಿಯಿಂದ ಮಹತ್ವದ ಕ್ರಮ ಎನಿಸಿದೆ. ಕೇಂದ್ರ ಸರಕಾರವು ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ...