ಭಾರತ, ಮಾರ್ಚ್ 17 -- ರಾಯಪುರದಲ್ಲಿ ಭಾನುವಾರ (ಮಾರ್ಚ್ 16) ಮುಕ್ತಾಯಗೊಂಡ ಇಂಟರ್​ನ್ಯಾಷನಲ್ ಮಾಸ್ಟರ್ಸ್ ಲೀಗ್ 2025ರ ಫೈನಲ್​ನಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಆರು ವಿಕೆಟ್​ಗಳಿಂದ ಸೋಲಿಸಿದ ಇಂಡಿಯಾ ಮಾಸ್ಟರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯವನ್ನು ಗೆದ್ದಿದ್ದರ ಹೊರತಾಗಿ ಹೆಚ್ಚು ಸದ್ದು ಮಾಡಿದ್ದು ಯುವರಾಜ್ ಸಿಂಗ್ ಮತ್ತು ಟಿನೊ ಬೆಸ್ಟ್​ ನಡುವಿನ ಜಗಳ. ಇವರಿಬ್ಬರ ನಡುವಿನ ಜೋರು ಕಿತ್ತಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಮೊದಲು ಬ್ಯಾಟಿಂಗ್ ನಡೆಸಿತು. ಲೆಂಡ್ಲ್ ಸಿಮನ್ಸ್ (57) ಅವರ ಅರ್ಧಶತಕ ಮತ್ತು ಡ್ವೇನ್ ಸ್ಮಿತ್ (45) ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ನಿಗದಿತ 20 ಓವರ್​​ಗೆ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಇಂಡಿಯಾ ಮಾಸ್ಟರ್ಸ್ ಪರ ವಿನಯ್ ಕುಮಾರ್ 3 ವಿಕೆಟ್ ಕಿತ್ತರೆ, ಶಹಬಾಜ್ ನದೀಮ್ 2 ವಿಕೆಟ್ ...