ಭಾರತ, ಮಾರ್ಚ್ 10 -- IIFA 2025 Full List Of Winners: ನಟ ಕಾರ್ತಿಕ್ ಆರ್ಯನ್ ಮತ್ತು ನಿರ್ದೇಶಕ ಕರಣ್ ಜೋಹರ್ (IIFA 2025) 25ನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಣೆ ಮಾಡಿದ್ದಾರೆ. ಭಾನುವಾರ (ಮಾರ್ಚ್ 9) ಜೈಪುರದಲ್ಲಿ 25ನೇ ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಲಾಪತಾ ಲೇಡೀಸ್ ಸಿನಿಮಾ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕಿರಣ್ ರಾವ್ ನಿರ್ದೇಶನದ ಈ ಸಿನಿಮಾ ಒಟ್ಟು 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ಈ ಸಿನಿಮಾಕ್ಕೆ ಲಭಿಸಿದೆ. ಕಾರ್ತಿಕ್ ಆರ್ಯನ್ ಉತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಅತ್ಯುತ್ತಮ ಚಿತ್ರ - ಲಾಪತಾ ಲೇಡೀಸ್

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ) - ಕಾರ್ತಿಕ್ ಆರ್ಯನ್ (ಭೂಲ್ ಭುಲೈಯಾ 3)

ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ) - ನಿತಾಂಶಿ ಗೋಯೆಲ್ (ಲಾಪತಾ ಲೇಡೀಸ್)

ಅತ್ಯುತ್ತಮ ನಿರ್ದೇಶನ - ಕಿರಣ್ ರಾವ್ (ಲಾಪತಾ ಲೇಡೀಸ್)

ನಕಾರಾತ್ಮಕ ಪಾತ್ರದಲ್ಲಿ ಅತ್ಯುತ್ತಮ ಅಭಿನಯ - ರಾಘವ್ ಜುಯಾಲ್...