ಭಾರತ, ಮಾರ್ಚ್ 13 -- IIFA 2025: ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನೋಡಬೇಕು ಎಂದು ಸಾಕಷ್ಟು ಜನ ಕಾತರದಿಂದ ಕಾಯುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮದ ಕೆಲ ತುಣುಕುಗಳು ಮಾತ್ರ ವೈರಲ್ ಆಗಿತ್ತು. ದೂರದರ್ಶನದಲ್ಲೂ IIFA 2025 ಕಾರ್ಯಕ್ರಮದ ಪ್ರಸಾರ ಮಾಡಬೇಕು ಎಂಬ ಮಾತು ಕೇಳಿ ಬರುತ್ತಿತ್ತು. ಅದರಂತೆ ಇದೀಗ IIFA 2025ರ ಪ್ರಶಸ್ತಿ ಪ್ರಧಾನ ಸಮಾರಂಭದ ಪ್ರಸಾರವನ್ನು ದೂರರ್ಶನದಲ್ಲಿ ಮಾಡಲಾಗುತ್ತದೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಸಾಕಷ್ಟು ಜನರಿಗೆ ಈ ಸಂಗತಿ ಖುಷಿ ತಂದಿದೆ. ಹಾಗಾದರೆ, ಯಾವ ವಾಹಿನಿಯಲ್ಲಿ ಇದು ಪ್ರಸಾರವಾಗುತ್ತದೆ? ಯಾವಾಗ ಪ್ರಸಾರವಾಗುತ್ತದೆ? ಎಂಬಿತ್ಯಾದಿ ಮಾಹಿತಿನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ಕಳೆದ ವಾರಾಂತ್ಯದಲ್ಲಿ ಜೈಪುರದಲ್ಲಿ ನಡೆದ IIFA 2025ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ನೋಡಲು ಕಾತರದಿಂದ ಕಾಯುತ್ತಿರುವ ಎಲ್ಲರಿಗೂ ಶುಭ ಸಮಾಚಾರವಿದೆ. IIFA ಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು ZEE TV ಯೊಂದಿಗೆ ಜಂಟಿ ಪೋಸ್ಟ್ ...