Bangalore, ಫೆಬ್ರವರಿ 6 -- ಬೆಂಗಳೂರು: ಕರ್ನಾಟಕ ಸರ್ಕಾರವು ಐಎಫ್‌ಎಸ್‌ ಅಧಿಕಾರಿ ವರ್ಗ ಮಾಡಲಾಗಿದೆ. ಕಳೆದ ಎರಡು ವರ್ಷದಿಂದ ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಡಿಸಿಎಫ್‌ ಆಗಿದ್ದ ಐಎಫ್‌ಎಸ್‌ ಅಧಿಕಾರಿ ಡಾ.ಸಂತೋಷ್‌ಕುಮಾರ್‌ ಅವರನ್ನು ವರ್ಗ ಮಾಡಲಾಗಿದೆ. ಡಾ.ಸಂತೋಷ್‌ ಕುಮಾರ್‌ ಅವರಿಗೆ ಬೆಂಗಳೂರಿನ ಅರಣ್ಯ ಭವನದಲ್ಲಿ ಡಿಸಿಎಫ್‌ ಹೆಡ್‌ಕ್ವಾರ್ಟರ್ಸ್‌ ಆಗಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕರ್ನಾಟಕ ಹಾಗೂ ತಮಿಳುನಾಡಿ ಗಡಿ ಪ್ರದೇಶದೊಂದಿಗೆ ವಿಶಾಲ ಪ್ರದೇಶವಾಗಿರುವ, ಕಾಡುಗಳ್ಳ ವೀರಪ್ಪನ್‌ ಅವರ ಕಾರ್ಯಕ್ಷೇತ್ರವಾಗಿದ್ದ ಮಲೈಮಹದೇಶ್ವರ ವನ್ಯಜೀವಿ ವಿಭಾಗದ ಡಿಸಿಎಫ್‌ ಆಗಿ ಪರಮೇಶ ಅವರನ್ನು ನೇಮಕ ಮಾಡಲಾಗಿದ್ದು. ಅವರು ಅಧಿಕಾರ ವಹಿಸಿಕೊಳ್ಳಬೇಕಿದೆ.

ಬಂಡೀಪುರದ ಹೆಡಿಯಾಲ ವನ್ಯಜೀವಿ ವಿಭಾಗದ ಎಸಿಎಫ್‌ ಆಗಿ ಕೆಲ ತಿಂಗಳ ಹಿಂದೆ ಉಪಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದ ಪರಮೇಶ್‌ ಅವರನ್ನು ಮಂಗಳೂರಿನ ಅರಣ್ಯ ನಿಗಮದಲ್ಲಿ ಡಿಸಿಎಫ್‌ ಆಗಿ ನಿಯೋಜಿಸಲಾಗಿತ್ತು. ಅಲ್ಲಿಂದ ಈಗ ಮಲೈಮಹದೇಶ...