Kollegal, ಮಾರ್ಚ್ 13 -- IFS Posting: ಇದು ಕಾಡಿನ ಬೆಂಕಿ ಸಮಯ. ಕಾಡಿನಲ್ಲಿದ್ದುಕೊಂಡು ಕೆಲಸ ಮಾಡಬೇಕಾದ ಅಧಿಕಾರಿಗಳು ಕೋರ್ಟ್‌ಗೆ ಅಲೆಯುವ ಸನ್ನಿವೇಶ. ಅದರಲ್ಲೂ ಒಂದು ಕಾಲಕ್ಕೆ ವೀರಪ್ಪನ್‌ನಿಂದಾಗಿ ಕುಖ್ಯಾತಿ ಪಡೆದಿದ್ದ ಮಲೈಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಈಗ ಉಪ ಸಂರಕ್ಷಣಾಧಿಕಾರಿ ಹುದ್ದೆ ಮ್ಯೂಸಿಕಲ್‌ ಚೇರ್‌ ನಡೆದಿದೆ. ಒಂದು ತಿಂಗಳ ಅವಧಿಯಲ್ಲಿಯೇ ಮೂವರು ಡಿಸಿಎಫ್‌ಗಳನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿ ಆಕ್ರೋಶಕ್ಕೆ ಗುರಿಯಾಗಿದೆ. ಮೊದಲಿದ್ದ ಐಎಫ್‌ಎಸ್‌ ಅಧಿಕಾರಿ ಬದಲಿಸಿ ಐಎಫ್‌ಎಸ್‌ ಅಲ್ಲದೇ ಅರಣ್ಯ ಸೇವೆ ಅಧಿಕಾರಿ ನಿಯೋಜಿಸಲಾಗಿತ್ತು. ಇಬ್ಬರ ಜಗಳ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಈಗ ಮೂರನೇ ಅಧಿಕಾರಿಯನ್ನು ಸೋಮವಾರ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆ ನೇಮಕ ಮಾಡಿರುವುದು ಮತ್ತಷ್ಟು ಗೊಂದಲ ಸೃಷ್ಟಿಸಿದೆ. ಇದರಿಂದ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲೂ ಗೊಂದಲ ನಿರ್ಮಾಣವಾಗಿದೆ.

ಬಹುತೇಕ ತಮಿಳುನಾಡು ಗಡಿ ಭಾಗ ಹೊಂದಿರುವ ಮಲೈಮಹದೇಶ್ವರ ಬೆಟ್ಟವೂ ಸೇರಿದಂತೆ ಪ್ರಮುಖ್ಯ ಅರಣ್ಯವಾಗಿ...