Bangalore, ಫೆಬ್ರವರಿ 19 -- IFS Posting: ಕರ್ನಾಟಕ ಅರಣ್ಯ ಇಲಾಖೆಯ ಆಡಳಿತದಲ್ಲಿ ಮುಂದಿನ ವಾರ ಇತಿಹಾಸ ಸೃಷ್ಟಿಯಾಗಲಿದೆ. ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಹಲವಾರು ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಐಎಫ್‌ಎಸ್‌ ಮಹಿಳಾ ಅಧಿಕಾರಿಗಳು ಕೂಡ ಕೆಲಸ ಮಾಡಿದ್ದಾರೆ. ಆದರೆ ಈವರೆಗೂ ಇಲಾಖೆಯ ಅತ್ಯುನ್ನತ ಹುದ್ದೆಯನ್ನು ಮಹಿಳೆಯೊಬ್ಬರು ಅಲಂಕರಿಸಿರಲಿಲ್ಲ. ಕರ್ನಾಟಕ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಡಿಜಿಪಿಯಾಗಿ ಮಹಿಳೆಯರು ಸೇವೆ ಸಲ್ಲಿಸಿದ್ದಾರೆ. ಅರಣ್ಯ ಇಲಾಕೆಯಲ್ಲಿ ಈ ಅವಕಾಶ ಬಂದಿರಲಿಲ್ಲ. ಆಂದರೆ ಕರ್ನಾಟಕ ಅರಣ್ಯ ಇಲಾಖೆ ಒಟ್ಟಾರೆ ಪಡೆಗಳ ಮುಖ್ಯಸ್ಥರಾಗಿ ( ಎಚ್‌ಒಎಫ್‌ಎಫ್‌) ಮಹಿಳೆಯೊಬ್ಬರು ಚುಕ್ಕಾಣಿ ಹಿಡಿದಿರಲಿಲ್ಲ. ಅದು ಈಗ ಆಗಲಿದೆ. ಕರ್ನಾಟಕದ ಹಿರಿಯ ಐಎಫ್‌ಎಸ್‌ ಅಧಿಕಾರಿ, ಸದ್ಯ ಕೇಂದ್ರ ಸೇವೆಯಲ್ಲಿರುವ ಮೀನಾಕ್ಷಿ ನೇಗಿ ಅವರು ಅರಣ್ಯ ಇಲಾಖೆ ಪಡಗಳ ಮುಖ್ಯಸ್ಥರಾಗಿ ನೇಮಕಗೊಳ್ಳಲಿದ್ದಾರೆ. ಈ ಸಂಬಂಧ ಪ್ರಕ್ರಿಯೆಗಳು ನಡೆದಿದ್ದು, ಅಧಿಕೃತವಾಗಿ ನೇಮಕ ಪ್ರಕಟಿಸುವುದು ಆದೇಶ ಬಾಕಿಯಿದೆ. ಅವರು ಈ ಹುದ...