ಭಾರತ, ಏಪ್ರಿಲ್ 15 -- ದಕ್ಷಿಣ ಭಾರತದಲ್ಲಿ ಬೆಳಗಿನ ಉಪಾಹಾರಕ್ಕೆ ಬೆಸ್ಟ್‌ ತಿನಿಸು ಎಂದರೆ ಇಡ್ಲಿ. ಬಹುತೇಕ ಹೋಟೆಲ್‌ ಮನೆಗಳಲ್ಲಿ ಇಡ್ಲಿ ಮಾಡುತ್ತಾರೆ. ಆದರೆ ಪದೇ ಪದೇ ಇಡ್ಲಿ ಮಾಡಿದ್ರೆ ಮಕ್ಕಳ ಬೇಸರ ಮಾಡಿಕೊಳ್ಳುತ್ತಾರೆ. ತಿನ್ನುವುದಿಲ್ಲ ಎಂದು ಹಟ ಹಿಡಿಯುತ್ತಾರೆ. ಅದಕ್ಕಾಗಿ ಇಡ್ಲಿಯಲ್ಲೇ ಸ್ಪೆಷಲ್‌ ಏನಾದ್ರೂ ಮಾಡಿ. ಇಡ್ಲಿ ಬಳಸಿಕೊಂಡು ಡಿಫ್ರೆಂಟಾಗಿ ರೆಸಿಪಿ ತಯಾರಿಸಿದ್ರೆ ಮಕ್ಕಳಾದಿಯಾಗಿ ಮನೆಯವರೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂತಾರೆ. ಅಂತಹ ರೆಸಿಪಿಗಳಲ್ಲಿ ಇಡ್ಲಿ ಮಂಚೂರಿಯನ್‌ ಕೂಡ ಒಂದು.

ಇಡ್ಲಿ ಮಂಚೂರಿಯನ್‌ ಮಾಡಿದಾಗ ಚಟ್ನಿ ಮಾಡಬೇಕು ಎಂದೇನಿಲ್ಲ. ಇದ್ರಿಂದ ನಿಮಗೆ ಸಮಯವೂ ಉಳಿಯುತ್ತದೆ. ಬೆಳಗಿನ ಉಪಾಹಾರದಲ್ಲಿ ಇಡ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು, ಹಾಗಾಗಿ ಈ ರೆಸಿಪಿ ತಯಾರಿಸಿ ಮಕ್ಕಳಿಗೆ ತಿನ್ನಲು ಕೊಟ್ಟು ನೋಡಿ. ಇದನ್ನು ಸುಲಭವಾಗಿ ಹಾಗೂ ಕಡಿಮೆ ಸಾಮಗ್ರಿಗಳನ್ನು ಬಳಸಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು: ಇಡ್ಲಿ - 5, ಟೊಮೆಟೊ - 1, ಹುಣಸೆಹಣ್ಣು - ಚಿಕ್ಕ ಉಂಡೆ, ಗರಂಮಸಾಲಾ ಪುಡಿ - ಒಂದ...