Bangalore, ಫೆಬ್ರವರಿ 13 -- ಬೆಂಗಳೂರು: ಕಳೆದ ಎರಡು ದಶಕದಿಂದ ಕರ್ನಾಟಕದ ನಾನಾ ಕಡೆಗಳಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಐಎಎಸ್‌ ದಂಪತಿ ಕೇಂದ್ರ ಸೇವೆಗೆ ತೆರಳಿದ್ದಾರೆ, ಎರಡು ತಿಂಗಳ ಹಿಂದೆಯೇ ದೆಹಲಿಗೆ ಐಎಎಸ್‌ ಅಧಿಕಾರಿ ಪತ್ನಿ ತೆರಳಿದ್ದರೆ, ಈಗ ಪತಿಯೂ ದೆಹಲಿಗೆ ವರ್ಗವಾಗಿದೆ. ಇದರೊಂದಿಗೆ ಮೂರು ತಿಂಗಳ ಹಿಂದೆಯಷ್ಟೇ ಐಎಫ್‌ಎಸ್‌ ದಂಪತಿ ಕೇಂದ್ರ ಸೇವೆಗೆ ಹೋಗಿದ್ದರು. ಇದರ ಬೆನ್ನಲ್ಲೇ ಐಎಎಸ್‌ ದಂಪತಿಯೂ ದೆಹಲಿಗೆ ಸ್ಥಳಾಂತರಗೊಂಡಿದ್ದಾರೆ. ಯಾವುದೇ ಕೇಂದ್ರ ಸೇವೆಯ ಅಧಿಕಾರಿಗೆ ಅವರು ಬಯಸಿದ ರಾಜ್ಯದಲ್ಲಿ ಇಲ್ಲವೇ ಕೇಂದ್ರ ಸೇವೆಯಲ್ಲಿ ಐದು ವರ್ಷದವರೆಗೂ ಕೆಲಸ ಮಾಡಲು ಅವಕಾಶ ಇರುತ್ತದೆ. ಕೆಲವೊಮ್ಮೆ ಇದು ವಿಸ್ತರಣೆಯೂ ಆಗಬಹುದು.

ಕರ್ನಾಟಕ ಕೇಡರ್‌ನ 2004 ನ ಬ್ಯಾಚ್‌ನ ಅಧಿಕಾರಿಗಳಾದ ಸಿ.ಶಿಖಾ ಹಾಗೂ ಡಾ.ಅಜಯನಾಗಭೂಷಣ್‌ ಕೇಂದ್ರ ಸೇವೆಗೆ ತೆರಳಿದವರು. ಸಿ. ಶಿಖಾ ಅವರು ಎರಡು ತಿಂಗಳ ಹಿಂದೆಯೇ ದೆಹಲಿಗೆ ವರ್ಗಗೊಂಡಿದ್ದರು. ಕೆಲವು ಕಾರಣಗಳಿಂದ ಡಾ.ಅಜಯನಾಗಭೂಷಣ್‌ ಅವರು ದೆಹಲಿಗೆ ವರ್ಗ ಆಗುವುದು ತಡವಾಗ...