Bangalore, ಜೂನ್ 4 -- ಬೆಂಗಳೂರು: ಕರ್ನಾಟಕ ಸರ್ಕಾರವು ಹಲವು ಹಿರಿಯ ಐಎಎಸ್‌ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ. ಈಗಾಗಲೇ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗಳಿಂದ ಕೆಲವು ಅಧಿಕಾರಿಗಳನ್ನು ಬದಲಾಯಿಸಲಾಗಿದ್ದರೆ, ಇನ್ನು ಕೆಲವರಿಗೆ ಹೊಸ ಹುದ್ದೆ ನೀಡಲಾಗಿದೆ. ಕೆಲವು ಐಎಎಸ್‌ ಅಧಿಕಾರಿಗಳಿಗೆ ಈಗಿರುವ ಹುದ್ದೆಯ ಜತೆ ಜತೆಯಲ್ಲಿಯೇ ಹೆಚ್ಚುವರಿ ಹುದ್ದೆಗಳನ್ನು ನೀಡಲಾಗಿದೆ. ವರ್ಗಗೊಂಡಿರುವ ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ಕೆ.ಎ.ದಯಾನಂದ, ಕೆಎಸ್ಆರ್‌ಟಿಸಿ ಎಂಡಿಯಾಗಿ ಬಿಎಂಟಿಸಿ ಎಂಡಿ ರಾಮಚಂದ್ರನ್‌ ಅವರಿಗೆ ಹೆಚ್ಚುವರಿ ಕಾರ್ಯಭಾರ ನೀಡಲಾಗಿದೆ. ಕಂದಾಯ ಇಲಾಖೆ ಆಯುಕ್ತ ಪೊಮ್ಮಲ ಸುನೀಲ್‌ ಕುಮಾರ್‌ ಅವರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮಹಾನಿರೀಕ್ಷಕರ ಹೆಚ್ಚುವರಿ ಕಾರ್ಯಭಾರವನ್ನು ವಹಿಸಲಾಗಿದೆ. ಐಎಫ್ಎ‌ಸ್‌ ಅಧಿಕಾರಿಯಾಗಿರುವ ಎಂಎಸ್‌ಐಎಲ್‌ ಎಂಡಿ ಮನೋಜ್‌ ಕುಮಾರ್‌ ಅವರಿಗೆ ರೇರಾ ಕಾರ್ಯದರ್ಶಿಯಾಗಿ ಹೆಚ್ಚುವರಿ ಕಾರ್ಯಭಾರ ನೀಡಲಾಗಿದೆ.

ಹಿರಿಯ ಐಎಎಸ್‌ ಅಧಿಕ...