Bangalore, ಮಾರ್ಚ್ 7 -- IAS Posting: ಕರ್ನಾಟಕದಲ್ಲಿ ಬಜೆಟ್‌ ಮಂಡನೆ ಗದ್ದಲದ ನಡುವೆಯೇ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ಸಾಹಿತಿ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿ ಡಾ. ಧರಣಿದೇವಿ ಮಾಲಗತ್ತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಐಎಎಸ್‌ ಅಧಿಕಾರಿಯಾಗಿರುವ ಕೆ.ಎಂ.ಗಾಯತ್ರಿ ಅವರನ್ನು ನಿಯೋಜಿಸಲಾಗಿದೆ. ಧರಣಿದೇವಿ ಮಾಲಗತ್ತಿ ಅವರು ಮಾತೃ ಇಲಾಖೆಯಾದ ಪೊಲೀಸ್‌ ಇಲಾಖೆಗೆ ಮರಳಿದ್ದಾರೆ. ಗುರುವಾರವೇ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿದ್ದು, ಕೆ ಎಂ ಗಾಯತ್ರಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಅಧಿಕಾರವನ್ನು ವಹಿಸಿಕೊಂಡರು. ಗಾಯತ್ರಿ ಅವರು ಈವರೆಗೂ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ ವಾರವಿನ್ನೂ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಡಾ. ಕೆ.ಧ...