ಭಾರತ, ಏಪ್ರಿಲ್ 2 -- IAS Officer Resigns: ಅವರು ಹಿರಿಯ ಐಎಎಸ್‌ ಅಧಿಕಾರಿ. ಈಗಾಗಲೇ ರಜೆಯಲ್ಲಿದ್ದರು. ಇನ್ನಷ್ಟು ದಿನ ರಜೆ ಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಕೇಂದ್ರ ಸರ್ಕಾರವು ಐಎಎಸ್‌ ಅಧಿಕಾರಿ ರಜೆ ಬೇಡಿಕೆಯನ್ನು ತಿರಸ್ಕರಿಸಿತು, ಸೇವೆಗೆ ಮರಳಬೇಕು ಎನ್ನುವ ಸೂಚನೆಯನ್ನು ನೀಡಿತು. ಆದರೆ ಐಎಎಸ್‌ ಅಧಿಕಾರಿ ತಮಗೆ ಇನ್ನಷ್ಟು ದಿನ ರಜೆ ಬೇಕು ಎನ್ನುವ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಕೇಂದ್ರ ಸರ್ಕಾರವೂ ಕೊನೆಗೂ ಹೆಚ್ಚುವರಿ ರಜೆ ಮಂಜೂರು ಮಾಡಲೇ ಇಲ್ಲ. ಕೊನೆಗೆ ಹಿರಿಯ ಐಎಎಸ್‌ ಅಧಿಕಾರಿ ರಾಜೀನಾಮೆ ನೀಡುವ ನಿರ್ಧಾರಕ್ಕೂ ಬಂದರು. ಅದಕ್ಕೂ ಕೇಂದ್ರ ಸರ್ಕಾರ ನಿರ್ಧಾರವನ್ನು ಬದಲಿಸಲಿಲ್ಲ. ಎರಡೂವರೆ ದಶಕದಿಂದ ಐಎಎಸ್‌ ಅಧಿಕಾರಿಯಾಗಿರುವ ಅವರು ರಾಜೀನಾಮೆಯನ್ನು ಸಲ್ಲಿಸಿದರು. ಕೇಂದ್ರ ಸರ್ಕಾರವೂ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಅನುಮೋದನೆಯನ್ನೂ ನೀಡಿತು.

ಇದು ಒಡಿಶಾ ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ ಸುಜಾತ ಆರ್ ಕಾರ್ತಿಕೇಯನ್ ಎಂಬುವವರು ಐಎಎಸ್‌ ಹುದ್ದೆ ತೊರೆದ ಕಥೆ. ಅವರಿಗೆ ಇನ್ನೂ ಕೆಲವು ವರ್...