Bangalore, ಮಾರ್ಚ್ 5 -- ಬೆಂಗಳೂರು: 2070ರ ವೇಳೆಗೆ ಇಂಗಾಲ ಶೂನ್ಯತೆ ಸಾಧಿಸುವ ಭಾರತದ ಗುರಿಯತ್ತ ಸಾಗುವ ಮಹತ್ವದ ಹೆಜ್ಜೆಯಾಗಿ, ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಮೊತ್ತ ಮೊದಲ ಬಾರಿಗೆ ಹೈಡ್ರೋಜನ್ ಚಾಲಿತ ಭಾರೀ ಟ್ರಕ್‌ ಗಳ ಪ್ರಯೋಗವನ್ನು ಆರಂಭಿಸಿದೆ. ಸುದೀರ್ಘ ದೂರದ ಸರಕು ಸಾಗಣೆ ಕ್ಷೇತ್ರವನ್ನು ಸುಸ್ಥಿರಗೊಳಿಸುವ ಈ ಪ್ರಯೋಗವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಮತ್ತು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಿದರು. ಟಾಟಾ ಮೋಟಾರ್ಸ್‌ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರೀಶ್ ವಾಘ್ ಹಾಗೂ ಭಾರತ ಸರ್ಕಾರ ಮತ್ತು ಎರಡು ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಐತಿಹಾಸಿಕ ಕಾರ್ಯದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಭಾರತದ ಹಸಿರು ಇಂಧನ ಗುರಿಯನ್ನು ಸಾಧಿಸುವುದರ ಜೊತೆಗೆ ಸುಸ್ಥಿರ ಸಾರಿಗೆ ಉತ್ಪನ್ನಗಳ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಚಾರದಲ್ಲಿ ತನ್ನ ಬದ್ಧತೆಯನ್ನು ಸಾರಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ...