ಭಾರತ, ಫೆಬ್ರವರಿ 14 -- ಸಂಜೆ ಸ್ನ್ಯಾಕ್ಸ್‌ಗೆ ಪ್ರತಿದಿನ ಒಂದೇ ಥರ ತಿಂಡಿ ತಿಂದು ಬೇಸರ ಮೂಡಿದ್ರೆ ಹೊಸ ರೀತಿಯ ತಿನಿಸುಗಳನ್ನು ನಾಲಿಗೆ ಬಯಸುತ್ತೆ. ಹಾಗಂತ ಎಣ್ಣೆಯಲ್ಲಿ ಕರಿದ ತಿನಿಸುಗಳು ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಅದಕ್ಕಾಗಿ ಬಾಯಿಗೆ ರುಚಿಸುವ ಜೊತೆ ಆರೋಗ್ಯವನ್ನೂ ಚೆನ್ನಾಗಿರಿಸುವ ಖಾದ್ಯಗಳನ್ನು ತಿನ್ನಲು ಪ್ರಾಶಸ್ತ್ಯ ಕೊಡಬೇಕಾಗುತ್ತದೆ.

ರುಚಿಯ ಜೊತೆ ಆರೋಗ್ಯವೂ ಚೆನ್ನಾಗಿರಬೇಕು ಅಂದ್ರೆ ನೀವು ಈ ಮಹಾರಾಷ್ಟ್ರ ಶೈಲಿಯ ಹುರ್ದಾ ಬೇಲ್ ರೆಸಿಪಿ ಟ್ರೈ ಮಾಡಬೇಕು. ಹುರ್ದಾ ಭೇಲ್ ಮಹಾರಾಷ್ಟ್ರದ ವಿಶೇಷ ಖಾದ್ಯವಾಗಿದ್ದು, ಇದು ತುಂಬಾ ರುಚಿಕರ ಮಾತ್ರವಲ್ಲದೆ ಪೌಷ್ಟಿಕವೂ ಆಗಿದೆ. ಹುರ್ದಾ ಭೇಲ್ ಅನ್ನು ಪಾಪ್ಡಿ ಮತ್ತು ಮಸಾಲೆಯುಕ್ತ ಚಟ್ನಿಯಿಂದ ತಯಾರಿಸಲಾಗುತ್ತದೆ. ಇದನ್ನು ಮಕ್ಕಳಿಂದ ದೊಡ್ಡವರೆಗೆ ಎಲ್ಲರೂ ಇಷ್ಟಪಡುತ್ತಾರೆ.

ಇದನ್ನೂ ಓದಿ: ಮಿಕ್ಕಿದ ಅನ್ನದಿಂದ ಮಾಡಬಹುದು ಸಖತ್ ಟೇಸ್ಟಿ ವಡಾ, ಬೆಳಗಿನ ಉಪಾಹಾರಕ್ಕೂ ಸಂಜೆ ಸ್ನ್ಯಾಕ್ಸ್‌ಗೂ ಹೊಂದುತ್ತೆ ಈ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಹುರ್ದಾ (ಹೆಸರು ಕಾಳು- 1ಕಪ...