ಭಾರತ, ಫೆಬ್ರವರಿ 12 -- ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ. ಈಗಾಗಲೇ ರೋಸ್‌ ಡೇಯಿಂದ ಪ್ರಾಮಿಸ್‌ ಡೇವರೆಗೆ ಆಚರಿಸಲಾಗಿದೆ. ಇಂದು ಹಗ್ ಡೇ. ಪ್ರತಿವರ್ಷ ಪ್ರೇಮಿಗಳ ವಾರ ಅಥವಾ ವ್ಯಾಲೆಂಟೈನ್ಸ್ ವೀಕ್‌ನ 6ನೇ ದಿನ ಹಗ್‌ ಡೇ ಆಚರಿಸಲಾಗುತ್ತದೆ. ಹಗ್‌ ಡೇ ಎನ್ನುವುದು ಪ್ರೇಮಿಗಳನ್ನು ಭಾವನಾತ್ಮಕವಾಗಿ ಹತ್ತಿರ ಮಾಡುವ ದಿನವಾಗಿದೆ. ಹಾಗಾದರೆ ಈ ದಿನವನ್ನು ಆಚರಿಸುವ ಉದ್ದೇಶವೇನು, ಹಗ್‌ ಡೇಯ ಇತಿಹಾಸ ಮಹತ್ವ ತಿಳಿಯಿರಿ.

ಹಗ್ ಡೇ ಎನ್ನುವುದು ಮನದ ಒಲುಮೆಯನ್ನು ಅಪ್ಪಿಕೊಳ್ಳುವ ಮೂಲಕ ತೋರುವ ದಿನ. ಅಪ್ಪಿಕೊಳ್ಳುವುದರಿಂದ ದೈಹಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ವ್ಯಕ್ತಿಗಳನ್ನು ಹತ್ತಿರ ಮಾಡುತ್ತದೆ. ಮಾತಿನ ಹಂಗಿಲ್ಲದೇ ಮನದ ಭಾವನೆಗಳು ಬದಲಾಗಲು ಅಪ್ಪುಗೆಯೂ ಒಂದು ದಾರಿ ಎಂದರೆ ತಪ್ಪಾಗಲಿಕ್ಕಿಲ್ಲ. ಜಗತ್ತಿನಲ್ಲಿ ಯಾವುದೇ ಸಾಮಾಜಿಕ ನಿರ್ಬಂಧಗಳಿಲ್ಲದೇ ಪ್ರೀತಿ ವ್ಯಕ್ತಪಡಿಸಲು ಇರುವ ಒಂದೇ ಒಂದು ಮಾರ್ಗ ಎಂದರೆ ಅದು ಅಪ್ಪಿಕೊಳ್ಳುವುದು.

ಇದನ್ನೂ ಓದಿ: Valentines Day Wishes: ನನ್ನೊಲುಮೆಯ ಆಕಾಶ ನೀನು; ಪ್ರೇಮಿಗ...