Hubli, ಮಾರ್ಚ್ 31 -- ವಾಣಿಜ್ಯ ರಾಜಧಾನಿ ಹುಬ್ಬಳ್ಳಿ, ಪೇಡೆ ನಗರಿ ಧಾರವಾಡ ಜಿಲ್ಲೆ ಒಳಗೊಂಡು ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮದಿಂದ ಆಚರಿಸಿದರು.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರು ಮಾಲಾನಾ ಜಹಿರುದ್ದೀನ ಖಾಜಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಹೊಸ ಬಟ್ಟೆಗಳನ್ನು ತೊಟ್ಟು, ಸುಗಂಧ ದ್ರವ್ಯ ಗಳನ್ನು ಲೇಪಿಸಿಕೊಂಡು ಬೈಕ್, ಕಾರುಗಳಲ್ಲಿ ಆಗಮಿಸಿ ಮೈದಾನದಲ್ಲಿ ಮೊದಲು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡರು.

ಹಳೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮೌಲಾನಾ ಮೊಹಮ್ಮದ್ ನಯೀಮುದ್ದೀನ್ ಅಶ್ರಫಿ ನೇತೃತ್ವದಲ್ಲಿ ಈದ್-ಉಲ್-ಫಿತರ್ ಸಾಮೂಹಿಕ ಪ್ರಾರ್ಥನೆ (ಈದ್ ನಮಾಜ್) ಮಾಡಲಾಯಿತು.

ಹುಬ್ಬಳ್ಳಿ ಉಣಕಲ್ ಟಿಂಬರ್ ಯಾರ್ಡ್ ರೇಲ್ವೆ ಸ್ಟೇಷನ್ ಹತ್ತಿರದ ಈದ್ಗಾ ಮೈದಾನದಲ್ಲಿ ಸೋಮವಾರ ರಮ್ಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಕೇಂ...