Hubli, ಮಾರ್ಚ್ 29 -- Hubli News: ಹುಬ್ಬಳ್ಳಿ ಸಮೀಪದಲ್ಲಿ ಹೊರಟಿದ್ದ ಪ್ರಯಾಣಿಕರಿಂದ ತುಂಬಿದ್ದ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ( ಎನ್‌ಡಬ್ಲುಕೆಆರ್‌ಟಿಸಿ) ಬಸ್‌ ಬೆಂಕಿಗೆ ಆಹುತಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಹುಬ್ಬಳ್ಳಿ- ವಿಜಯಪುರ- ಸೊಲಾಪುರ ಮುಖ್ಯ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಸಾರಿಗೆ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಕೂಡಲೇ ಹೊರಗೆ ಬಂದಿದ್ದಾರೆ. ಪ್ರಯಾಣಿಕರು ಇಳಿಯುವ ವೇಳೆ ಸಣ್ಣಗೆ ಇದ್ದ ಬೆಂಕಿ ಪ್ರಮಾಣ ಆನಂತರ ಹೆಚ್ಚಿ ಬಸ್‌ನ ಒಳ ಭಾಗ ಹಾಗೂ ಹೊರ ಭಾಗ ಸುಟ್ಟು ಹೋಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಲೇ ಧಾವಿಸಿ ಬಸ್‌ನಲ್ಲಿ ಹೊತ್ತಿದ್ದ ಬೆಂಕಿಯನ್ನು ನಂದಿಸಿದರು.

Published by HT Digital Content Services with permission from HT Kannada....