Hubli Dharwad, ಮಾರ್ಚ್ 10 -- ಧಾರವಾಡ: ಹುಬ್ಬಳ್ಳಿ ಧಾರವಾಡ ನಡುವೆ ಏಳೆಂಟು ವರ್ಷದಿಂದ ಚಿಗರಿ ಓಡುತ್ತಿವೆ. ಅದೂ ನೀಲಿ ಬಣ್ಣದ ಚಿಗರಿ. ಒಂದಲ್ಲ ಎರಡಲ್ಲ. ಬರೋಬ್ಬರಿ 120 ನೀಲಿ ಚಿಗರಿಗಳು ಓಡುತ್ತವೆ. ಬೆಳ್ಳಂಬೆಳಗ್ಗೆ 6ಕ್ಕೆ ಓಡಲು ಶುರು ಮಾಡಿದರೆ ರಾತ್ರಿ 10 ರವರೆಗೂ ನಿಲ್ಲದೇ ಓಡುತ್ತಲೇ ಇರುತ್ತವೆ. ಜನ ಈ ಚಿಗರಿ ಏರಿ ಹೋಗುತ್ತಾರೆ. ಹುಬ್ಬಳ್ಳಿಯಿಂದ ಧಾರವಾಡ ಹಾಗೂ ಧಾರವಾಡದಿಂದ ಹುಬ್ಬಳ್ಳಿಯ ಮಧ್ಯೆ ಹದಿನೈದಕ್ಕೂ ಹೆಚ್ಚು ಕಡೆಗೆ ಚಿಗರಿಯನ್ನು ಹತ್ತಿ ಇಳಿಯುತ್ತಾರೆ ಜನ. ಚಿರಗಿ ಏರಿದರೆ ಕೂಲ್‌ ಕೂಲ್‌. ವೇಗದಲ್ಲಿ ಚಿಗರಿಗಳಿಗೆ ಸಾಟಿಯೇ ಇಲ್ಲ. ಅಷ್ಟರ ಮಟ್ಟಿಗೆ ಓಡುತ್ತವೆ. ಜನರೂ ಚಿಗರಿಯನ್ನೇರಿ ದಿನವನ್ನು ಕಳೆಯುತ್ತಾರೆ. ಖುಷಿಯಾಗುತ್ತಾರೆ. ಈ ಚಿಗರಿಗಳು ಕಡಿಮೆ ಬೆಲೆಯೇನೂ ಅಲ್ಲ. ಲಕ್ಷಗಟ್ಟಲೇ ಬೆಲೆ ಬಾಳುತ್ತವೆ. ಚಿಗರಿ ಓಟದ ಅಕ್ಕಪಕ್ಕದ ಮಾರ್ಗದವರಿಗೆ ಕಿರಿಕಿರಿಯಾಗಿ ಗಲಾಟೆಯೂ ಆಗುತ್ತಿದೆ.

ಇದು ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡ ನಡುವಿನ ಬಿಆರ್‌ಟಿಎಸ್ ಎಂಬ ಬಸ್‌ ಸೇವೆಯ ಕಥಾನಕ.

ನ...