ಭಾರತ, ಮಾರ್ಚ್ 15 -- ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮನೆಯ ಬಳಿ ಮಾಡಿದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ (Hubli dharwad Crime) ಉಪನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶ ಮೂಲದ ಆರೋಪಿಗಳಾದ ಇರ್ಷಾದ್ ಹಾಗೂ ಅಕ್ಬರ್ ಕಾಲಿಗೆ ಗುಂಡೇಟು ತಗುಲಿದೆ. ಮತ್ತೊಬ್ಬ ಆರೋಪಿ ರಾಯನಾಳ ಬ್ರಿಜ್ ಬಳಿ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಅವಳಿ ನಗರದ ನಾಲ್ಕೈದು ಕಳುವಿನ ಪ್ರಕರಣಗಳಲ್ಲಿ ಬೇಕಾಗಿದ್ದ ಈ ಗ್ಯಾಂಗ್‌ಗಾಗಿ ತೀವ್ರ ಶೋಧ ನಡೆಸಲಾಗಿತ್ತು. ಅಲ್ಲದೆ ದೆಹಲಿ ಹಾಗೂ ಉತ್ತರ ಪ್ರದೇಶಕ್ಕೂ ಹೋಗಿ ಬರಲಾಗಿತ್ತು. ಬೆಳಗಿನ ಜಾವ ಮೂವರು ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ದೇವರಗುಡಿಹಾಳ ಬಳಿ ಯತ್ನಿಸಿದಾಗ ಉಪನಗರ ಇನ್ಸ್‌ಪೆಕ್ಟರ್ ಎಂ. ಎಸ್. ಹೂಗಾರ, ಪಿಎಸ್‌ಐ ದೇವೆಂದ್ರ ಮಾವಿನಹಂಡಿ ಹಾಗೂ ಇಬ್ಬರು ಪೇದೆಗಳು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ....