Bangalore, ಫೆಬ್ರವರಿ 25 -- HSRP Number plate: ಕರ್ನಾಟಕದಲ್ಲಿ ವಾಹನಗಳಿಗೆ ಭದ್ರತೆ ಆಧರಿತ ನೋಂದಣಿಗೆ ಸಂಖ್ಯೆ ಅಳವಡಿಸುವ ಹೆಚ್‌ಎಸ್‌ಆರ್‌ಪಿ(High Security Registration Plate) ನಂಬರ್‌ಪ್ಲೇಟ್‌ಗೆ ನಿಗದಿಯಾಗಿದ್ದ ಗಡುವು ಮತ್ತೊಮ್ಮೆ ವಿಸ್ತರಣೆಗೊಂಡಿದೆ. ಮೂರು ವರ್ಷದಲ್ಲಿ ಆರನೇ ಬಾರಿಗೆ ಕರ್ನಾಟಕ ಸಾರಿಗೆ ಇಲಾಖೆ ಡೆಡ್‌ಲೈನ್ ಅನ್ನು ವಿಸ್ತರಿಸಿದೆ. ಕರ್ನಾಟಕ ಸರ್ಕಾರವು ಹಳೆಯ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಗಡುವನ್ನು ಮತ್ತೊಮ್ಮೆ ಮಾರ್ಚ್ 31ಕ್ಕೆ ವಿಸ್ತರಿಸಿದೆ. ಇದು ಆರನೇ ಬಾರಿಯ ಗಡುವು ವಿಸ್ತರಣೆಯಾಗಿದ್ದು, 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿತ ವಾಹನಗಳಿಗೆ ಇದು ಕಡ್ಡಾಯವಾಗಿದೆ. ಹೆಚ್‌ಎಸ್‌ಆರ್‌ಪಿ ಅಳವಡಿಕೆಯಿಂದ ವಾಹನಗಳ ಭದ್ರತೆ ಹೆಚ್ಚಾಗಲಿದೆ ಮತ್ತು ಅಕ್ರಮ ವಾಹನಗಳನ್ನು ಪತ್ತೆಹಚ್ಚಲು ಸಹಾಯವಾಗಲಿದೆ ಎನ್ನುವುದು ಇದರ ಹಿಂದಿರುವ ಉದ್ದೇಶ.
ಜನವರಿ 31ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಲಾಗಿತ್ತು. ಇದೀಗ ಸಾರಿಗೆ ಇಲಾಖೆ ಮತ್ತೆ ಮಾರ್ಚ್ 31ರವರೆಗೆ...
Click here to read full article from source
To read the full article or to get the complete feed from this publication, please
Contact Us.