Dandeli, ಏಪ್ರಿಲ್ 27 -- ಆ ಹಕ್ಕಿಗಳು ನೋಟದಲ್ಲಿ ಭಿನ್ನ, ಅವುಗಳ ಬದುಕು ಇನ್ನೂ ವಿಭಿನ್ನ. ಅತಿ ಉದ್ದನೆಯ ಕೊಕ್ಕು, ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಆಕರ್ಷಕ ಮೈ ಬಣ್ಣದ ಹಕ್ಕಿ ಗಳು ತಮ್ಮ ಕೂಗುಗಳು ಒಂದು ತರಹದ ಕೀರಲು ಧ್ವನಿಯಿಂದ ಕೂಡಿದ್ದು, ಜೋಡಿಗಳಾಗಿ ಅಥವಾ ಸಣ್ಣ ಗುಂಪುಗಳಾಗಿ ಹಾರಾಡುವ ಅತ್ಯಾಕರ್ಷಕ ಹಕ್ಕಿಗಳೇ ಮಂಗಟ್ಟೆ( Hornbill) ಹಕ್ಕಿಗಳು. ಕರ್ನಾಟಕದಲ್ಲಿ ಹಲವು ಕಡೆಗಳಲ್ಲಿ ಮಂಗಟ್ಟೆ ಹಕ್ಕಿಗಳು ಕಂಡು ಬಂದರೂ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಆಸು ಪಾಸಿನಲ್ಲಿ ಇವುಗಳ ಸಂಖ್ಯೆ ಹೆಚ್ಚಿದೆ. ಏಪ್ರಿಲ್‌ ಬಂದರೆ ಅವುಗಳ ಗೂಡು ಕಟ್ಟುವ ಕಾಯಕ ಶುರುವಾಗುತ್ತದೆ. ಮುಂದಿನ ಮೂರು ತಿಂಗಳು ಮಂಗಟ್ಟೆಗಳಿಗೆ ಮನೆ ನಿರ್ಮಿಸಿಕೊಳ್ಳುವ ತವಕ.

ಜಗತ್ತಿನಾದ್ಯಂತ ಒಟ್ಟು 62 ಪ್ರಬೇಧಗಳು ಭಾರತದಲ್ಲಿ 9 ಬಗೆಯ ಮತ್ತು ಕರ್ನಾಟಕದಲ್ಲಿ 4 ಜಾತಿಯ ಮಂಗಟ್ಟೆ ಹಕ್ಕಿಗಳು ಕಾಣ ಸಿಗುತ್ತವೆ. ವಿಭಿನ್ನವಾದ ನಾಲ್ಕು ಪ್ರಭೇದ ಹಾರ್ನ್‌'ಬಿಲ್‌'ಗಳಾದ ಗ್ರೇಟ್ ಹಾರ್ನ್‌ಬಿಲ್, ಮಲಬಾರ್ ಫೈಡ್ ಹಾರ್ನ್'ಬಿಲ್, ಮಲಬ...