Chikkamagaluru, ಮಾರ್ಚ್ 3 -- ಮಲೆನಾಡಿನ ಬೆಟ್ಟಗಳ ನಡುವೆ ನೆಲೆ ನಿಂತಿರುವ ಕಳಸ ತಾಲ್ಲೂಕಿನ ಹೊರನಾಡಿನಲ್ಲಿ ಅನ್ನಪೂರ್ಣೇಶ್ವರಿ ರಥೋತ್ಸವವು ಭಾನುವಾರ ಜರುಗಿತು.

ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಈ ಬಾರಿಯ ರಥೋತ್ಸವದಲ್ಲಿ ಭಕ್ತಿ ಭಾವದೊಂದಿಗೆ ಪಾಲ್ಗೊಂಡರು.

ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಕರ್ನಾಟಕದ ಪ್ರಮುಖ ಶಕ್ತ ಪೀಠಗಳಲ್ಲಿ ಒಂದಾದ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ರಥೋತ್ಸವ ಮಾರ್ಚ್‌ ಮೊದಲ ವಾರದಲ್ಲಿ ಜರುಗುತ್ತದೆ.

ಪ್ರತಿ ವರ್ಷದಂತೆ ಈ ಬಾರಿಯ ರಥೋತ್ಸವಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸಿದ್ದತೆಗಳನ್ನು ಮಾಡಿಕೊಂಡಿತ್ತು.

ಹೊರನಾಡಿಗೆ ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು, ಹಾಸನ ಭಾಗದಿಂದ ಬಸ್‌ ಸಂಪರ್ಕವೂ ಚೆನ್ನಾಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರಕ್ಕೆ ಬರುತ್ತಾರೆ.

Published by HT Digital Content Services with permission from HT Kannada....