ಭಾರತ, ಮಾರ್ಚ್ 25 -- ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ ಮಧುಬಲೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆಎನ್ ರಾಜಣ್ಣ ಇಂದು ಪ್ರತಿಕ್ರಿಯೆ ನೀಡಿದ್ದಾರೆ. 'ಇದು ಅಪರಿಚಿತರ ಕೃತ್ಯ, ಈ ಬಗ್ಗೆ ನನ್ನ ಬಳಿ ಯಾವುದೇ ದಾಖಲೆಗಳಿಲ್ಲ' ಎಂದು ಹೇಳಿದ್ದಾರೆ. ಮಾತ್ರವಲ್ಲ 'ಇಂದು ಗೃಹಸಚಿವರಿಗೆ ದೂರು ನೀಡುತ್ತೇನೆ' ಎಂದು ಸಹ ಹೇಳಿದ್ದಾರೆ.

ಸಹಕಾರಿ ಸಚಿವರಾಗಿರುವ ರಾಜಣ್ಣ 'ಇವತ್ತು ಮಧುಬಲೆ ಪ್ರಕರಣಕ್ಕೆ ಸಂಬಂಧಿಸಿ ದೂರು ದಾಖಲಿಸುತ್ತೇನೆ. ಗೃಹ ಸಚಿವರಿಗೆ ದೂರು ಕೊಡ್ತೀನಿ. ಇಷ್ಟು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳಿದ್ದ ಕಾರಣ ದೂರು ಕೊಡಲು ಆಗಿರಲಿಲ್ಲ. ನಾನೇ ಇವತ್ತು ಕುಳಿತು ದೂರು ರೆಡಿ ಮಾಡಿದ್ದೇನೆ. ಪರಮೇಶ್ವರ್ ಅವರನ್ನು ಹುಡುಕಿಕೊಂಡು ಹೋಗಿ ದೂರು ಕೊಡ್ತೀನಿ. ಆದರೆ ಈ ಪ್ರಕರಣ ಸಂಬಂಧ ನನ್ನ ಬಳಿ ಯಾವುದೇ ದಾಖಲೆಯಿಲ್ಲ. ಆದರೆ ಒಟ್ಟು ಮೂರು ಪುಟಗಳ ದೂರು ಬರೆದಿದ್ದೇನೆ. ಅದನ್ನು ಪರಮೇಶ್ವರ್ ಅವರಿಗೆ ಕೊಡ್ತೀನಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧುಬಲೆ ವಿವಾದ ರಾಹುಲ್‌ ಗಾಂಧಿ ಅಂಗಳ...