Bangalore, ಮಾರ್ಚ್ 27 -- Honey Trap: ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿರುವ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಅವರ ಪುತ್ರ ರಾಜೇಂದ್ರ ರಾಜಣ್ಣ ಅವರನ್ನು ಮಧುಬಲೆ( ಹನಿ ಟ್ರ್ಯಾಪ್‌)ಗೆ ಸಿಲುಕಿಸುವ ಪ್ರಯತ್ನದ ಪ್ರಕರಣವನ್ನು ಕೇಂದ್ರ ತನಿಖಾ ದಳ(ಸಿಐಡಿ)ಗೆ ಒಪ್ಪಿಸಲಾಗಿದೆ. ಈ ಸಂಬಂಧ ಕರ್ನಾಟಕ ಗೃಹ ಸಚಿವಾಲಯವು ಅಧಿಕೃತ ಆದೇಶವನ್ನು ಹೊರಡಿಸಿದೆ. ತಮ್ಮನ್ನು ಮಧುಬಲೆಗೆ ಸಿಲುಕಿಸಲು ಹಲವರು ಪ್ರಯತ್ನಿಸಿದ್ದರು. ಎರಡು ಮೂರು ಬಾರಿ ಕಚೇರಿ, ಅತಿಥಿಗೃಹಕ್ಕೂ ಕೆಲವರು ಬಂದಿದ್ದರು. ಇದರ ಹಿಂದೆ ದುರುದ್ದೇಶವಿರಬಹುದು ಎಂದು ಸಚಿವ ಕೆ.ಎನ್‌.ರಾಜಣ್ಣ ಅವರು ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿಯೇ ಬಹಿರಂಗವಾಗಿ ಆರೋಪಿಸಿದ್ದರು. ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ತನಿಖೆ ಆದೇಶವನ್ನು ಹೊರಡಿಸಿದೆ.

Published by HT Digital Content Services with permission from HT Kannada....