Bangalore, ಮಾರ್ಚ್ 21 -- Honey Trap: ಕರ್ನಾಟಕ ಮಾತ್ರವಲ್ಲದೇ ಭಾರತದ ಹಲವು ರಾಜ್ಯಗಳಲ್ಲಿ ಮಧುಬಲೆ( ಹನಿ ಟ್ರ್ಯಾಪ್ ) ನಡೆದಿವೆ. ನಡೆಯುತ್ತಲೇ ಇರುತ್ತವೆ. ಅದರಲ್ಲೂ ಅಧಿಕಾರಸ್ಥರು. ಹಣವಂತರನ್ನು ಗುರಿಯಾಗಿಟ್ಟುಕೊಂಡು ಹೀಗೆ ಜಾಲಕ್ಕೆ ಸಿಲುಕಿಸಿದ ಸಾಕಷ್ಟು ಉದಾಹರಣೆಗಳಿವೆ. ಕೆಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳು, ಸಚಿವರು ಕೂಡ ಈ ಬಲೆಗೆ ಸಿಲುಕಿದ್ದಾರೆ. ಕರ್ನಾಟಕದಲ್ಲೂ ಇಂತಹ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕೆಲವು ಪ್ರಕರಣಗಳಲ್ಲಿ ಹೀಗೆ ಜಾಲಕ್ಕೆ ಬೀಳಿಸಲು ಹೋಗಿ ಸಿಕ್ಕಿಬಿದ್ದವರ ವಿರುದ್ದ ಕಾನೂನು ಕ್ರಮಗಳು ಆಗಿವೆ. ಹೆಚ್ಚಿನ ಪ್ರಕರಣದಲ್ಲಿ ದೂರು ನೀಡಬೇಕಾದ ಗಣ್ಯರು ಮಾನ ಇಲ್ಲವೇ ಕಾನೂನಿನ ಕಾರಣಕ್ಕೆ ಅಂಜಿ ಹಿಂದೆ ಸರಿಯುತ್ತಾರೆ. ದೂರು ದಾಖಲಾಗದೇ ಅಲ್ಲಿಗೆ ನಿಂತು ಹೋಗುತ್ತವೆ.

Published by HT Digital Content Services with permission from HT Kannada....