Bengaluru, ಏಪ್ರಿಲ್ 16 -- ಜಪಾನ್ ಮೂಲದ ಜನಪ್ರಿಯ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ 2025ರ ಡಿಯೋ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ನವೀಕರಿಸಿದ ಸ್ಕೂಟರ್ ಆಕರ್ಷಕ ವಿನ್ಯಾಸದ ಬದಲಾವಣೆಗಳು, ಒಬಿಡಿ 2-ಕಾಂಪ್ಲೈಂಟ್ ಎಂಜಿನ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 2025ರ ಹೋಂಡಾ ಡಿಯೋವನ್ನು ಡಿಎಲ್ಎಕ್ಸ್ ಮತ್ತು ಎಚ್-ಸ್ಮಾರ್ಟ್ ಎಂಬ ಎರಡು ಆವೃತ್ತಿಗಳಲ್ಲಿ ಪರಿಚಯಿಸಲಾಗಿದೆ. ಇವುಗಳ ಬೆಲೆ ಕ್ರಮವಾಗಿ 96,749 ಮತ್ತು 1,02,144 ರೂ. ಇದ್ದು, ಎರಡೂ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

2025ರ ಹೋಂಡಾ ಡಿಯೋ ಸ್ಕೂಟರ್‌ನಲ್ಲಿ 4.2 ಇಂಚಿನ ಟಿಎಫ್‌ಟಿ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಇದು ಈಗ ಮೈಲೇಜ್ ಇಂಡಿಕೇಟರ್, ಟ್ರಿಪ್ ಮೀಟರ್, ಇಕೋ ಇಂಡಿಕೇಟರ್ ಮತ್ತು ಶ್ರೇಣಿಯನ್ನು ತೋರಿಸುತ್ತದೆ. ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್ ಬೆಂಬಲವೂ ಇದೆ, ಇದು ನ್ಯಾವಿಗೇಷನ್ ಮತ್ತು ಕಾಲ್ ಮತ್ತು ಮೆಸೇಜ್ ನೋಟಿಫಿಕೇಶನ್ ಅಲರ್ಟ್ ಕಾರ್ಯಗಳನ್ನು ಸಕ್ರಿಯಗೊಳಿಸುತ್ತದೆ, ಸವಾರರು ಚಲಿಸುವ...