Bengaluru, ಮಾರ್ಚ್ 6 -- ಜಪಾನ್ ಮೂಲದ ಜನಪ್ರಿಯ ಅಟೊಮೊಬೈಲ್ ಕಂಪನಿ ಹೋಂಡಾ, ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ ಇದ್ದರೂ, ಹೋಂಡಾ ಮಾತ್ರ ಜನಪ್ರಿಯ ಆಕ್ಟಿವಾ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ನೂತನ ಹೋಂಡಾ ಆಕ್ಟಿವಾ ಇ ಸ್ಕೂಟರ್‌, ಡೀಲರ್‌ಗಳಿಗೆ ರವಾನೆಯಾಗಿದ್ದು, ಶೀಘ್ರದಲ್ಲೇ ಗ್ರಾಹಕರ ಕೈಸೇರಲಿದೆ. ಹೋಂಡಾ ಕಂಪನಿ ರಾಜ್ಯದ ಬೆಂಗಳೂರು ಸಹಿತ, ದೆಹಲಿ ಮತ್ತು ಮುಂಬೈನಲ್ಲಿ ಆಕ್ಟಿವಾ ಇ ಬುಕಿಂಗ್ ಸ್ವೀಕರಿಸುತ್ತಿದೆ. ಹೋಂಡಾ ಕಂಪನಿಯು 2025ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್ ಪೋದಲ್ಲಿ ಆಕ್ಟಿವಾ ಇ ಸ್ಕೂಟರ್ ಅನ್ನು ಮೊದಲು ಪರಿಚಯಿಸಿತ್ತು.

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಟಿವಿಎಸ್ ಐಕ್ಯೂಬ್, ವಿಡಾ ವಿ 1, ಬಜಾಜ್ ಚೇತಕ್, ಅಥೆರ್ ರಿಜ್ಟಾ, ಓಲಾ ಎಸ್ 1 ಪ್ರೊ, ಸಿಂಪಲ್ ಒನ್, ಆಂಪಿಯರ್ ನೆಕ್ಸಸ್ ಮುಂತಾದವು ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡಲಿವೆ.

ನೂತನ ಹೋ...