Bengaluru, ಮಾರ್ಚ್ 9 -- Lakshmi Nivasa Serial: ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರವಾದ ವರೆಗೆ ರಾತ್ರಿ 8ರಿಂದ 9ರ ವರೆಗೆ ಪ್ರಸಾರವಾಗುವ ಸೀರಿಯಲ್ ಲಕ್ಷ್ಮೀ ನಿವಾಸ. ಹಲವು ಕಥೆಗಳ ಗುಚ್ಛವಾಗಿ ಮೂಡಿಬರುತ್ತಿರುವ ಈ ಸೀರಿಯಲ್‌, ಟಿಆರ್‌ಪಿ ವಿಚಾರದಲ್ಲಿಯೂ ಸದಾ ಟಾಪ್‌ನಲ್ಲಿಯೇ ಕಾಣಿಸಿಕೊಳ್ಳುತ್ತದೆ. ಸೀರಿಯಲ್‌ನಲ್ಲಿ ಮನೆ ಯಜಮಾನ ಶ್ರೀನಿವಾಸನಿಗೆ ಚೆಂದದ ಮನೆ ಕಟ್ಟಬೇಕು ಅನ್ನೋ ಆಸೆ. ಆ ಮನೆಗೆ ಲಕ್ಷ್ಮೀ ನಿವಾಸ ಎಂಬ ಹೆಸರಿಡಬೇಕು ಅನ್ನೋ ಬಯಕೆ. ಇಂತಿಪ್ಪ ಶ್ರೀನಿವಾಸ್‌ ಪಾತ್ರಧಾರಿ ಅಶೋಕ್‌ ಜಂಬೆ ಅವರ ರಿಯಲ್‌ ಲೈಫ್‌‌ ಮನೆ ತುಂಬ ವಿಶೇಷವಾಗಿದೆ.

ಬೆಂಗಳೂರಿನ ಹೊಸಕೆರೆಹಳ್ಳಿ ಬಡಾವಣೆಯಲ್ಲಿ ಅಶೋಕ್‌ ಜಂಬೆ ಅವರ ಮನೆಯಿದೆ. ಕಳೆದ 20 ವರ್ಷದ ಹಿಂದೆಯೇ ಮನೆ ಕಟ್ಟಿದ್ದರೂ, ಐದು ವರ್ಷದ ಹಿಂದೆ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ನೋಡಲು ಥೇಟ್‌ ಮಲೆನಾಡ ಶೈಲಿಯಲ್ಲಿ 30-45 ಚದರ ಅಡಿಯಲ್ಲಿ ಈ ಮನೆಯನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಸೈಕೋ ಜಯಂತ್ ಅಜ್ಜಿಯ ರೂಮ್‌ನಲ್ಲಿ ಕ್ಯಾಮೆರಾ ಇರಿ...