Bengaluru, ಜನವರಿ 26 -- ಚಳಿಗಾಲ ಯಾವಾಗಲೂ ತನ್ನೊಂದಿಗೆ ಸೋಂಕುಗಳನ್ನು ತೆಗೆದುಕೊಂಡೇ ಬರುತ್ತದೆ. ಚಳಿಗಾಲದಲ್ಲಿ ಶೀತ, ಕೆಮ್ಮುಗಳಂತಹ ಕಾಯಿಲೆಗಳು ಸಾಮಾನ್ಯ. ನಾವೀಗ ಚಳಿಗಾಲದ ಕೊನೆಯ ಹಂತದಲ್ಲಿದ್ದೇವೆ. ಇನ್ನೇನು ಚಳಿ ಕಡಿಮೆಯಾಗಿ ಬಿಸಿಲು ಏರಲಿದೆ. ಈ ಋತುಮಾನದ ಬದಲಾವಣೆಯ ಸಮಯದಲ್ಲಿ ಅನೇಕ ಸೋಂಕುಗಳನ್ನು ತರುತ್ತದೆ. ಅದರಲ್ಲಿ ಶೀತ, ಕೆಮ್ಮು ಕೂಡಾ ಸೇರಿವೆ. ಶೀತ ವಾಸಿಯಾದರೂ ಕೆಮ್ಮು ಮಾತ್ರ ಬಿಟ್ಟು ಬಿಡದೆ ಕಾಡುತ್ತದೆ. ಇದಕ್ಕೆ ಕೆಲವು ನೈಸರ್ಗಿಕ ಗಿಡಮೂಲಿಕೆ ವಸ್ತುಗಳನ್ನು ಬಳಸಿದರೆ ಆರಾಮವನ್ನು ನೀಡುತ್ತವೆ. ಅವುಗಳಿಂದ ತಯಾರಿಸಿದ ಕಷಾಯ, ಚಹಾ, ಪಾನೀಯಗಳು, ಗಂಟಲಿನ ಕಿರಿಕಿರಿಯನ್ನು ಶಮನಗೊಳಿಸಿ, ಕೆಮ್ಮನ್ನು ನಿವಾರಿಸುತ್ತದೆ. ಹರ್ಬಲ್‌ ಟೀ ಅಥವಾ ಗಿಡಮೂಲಿಕೆ ಚಹಾಗಳು ಕೆಮ್ಮಿನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ.

ಕೆಮ್ಮು ಕಡಿಮೆಯಾಗಲು ಹರ್ಬಲ್‌ ಟೀಯನ್ನು ಕುಡಿಯುವುದು ಒಂದು ಆರೋಗ್ಯಕರ ಮನೆಮದ್ದು ಎಂದು ಹೇಳಲಾಗುತ್ತದೆ. ಜರ್ನಲ್‌ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಹರ್ಬಲ್‌ ಟೀಯಲ್ಲಿ ಕೆಮ್ಮು ನ...