Bengaluru, ಫೆಬ್ರವರಿ 23 -- ಕೊರೋನಾದ ಬಳಿಕ ಜಗತ್ತಿನ ಬಹಳಷ್ಟು ಕಂಪನಿಗಳು ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ತನ್ನ ಉದ್ಯೋಗಿಗಳಿಗೆ ನೀಡುತ್ತಿದೆ. ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ಒಳ್ಳೆಯದೇ ಆದರೆ ಉತ್ಪಾದಕತೆಯನ್ನು ಹೆಚ್ಚಿಸಲು ವ್ಯವಸ್ಥಿತ ಹೋಮ್ ಆಫೀಸ್ ಸಜ್ಜುಗೊಳಿಸುವುದು ಕೂಡ ಅಷ್ಟೇ ಅತ್ಯಗತ್ಯ. ಒಂದೇ ಕಡೆಯಲ್ಲಿ ಕುಳಿತುಕೊಂಡು ಕೆಲಸ ಮಾಡುವ ಅನಿವಾರ್ಯ ಸಂದರ್ಭದಲ್ಲಿ ನಾವು ಕೆಲಸ ಮಾಡುವ ಸ್ಥಳಕ್ಕೂ ಗಮನ ಕೊಡಬೇಕು, ಸುಂದರ ಮತ್ತು ಸ್ವಚ್ಛ ತಾಣವನ್ನು ರಚಿಸುವುದು ಮತ್ತು ಅದನ್ನು ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಿ, ಅದರ ಮೂಲಕ ನಮ್ಮ ಕಾರ್ಯಕ್ಷಮತೆ ಹೆಚ್ಚಿಸುವುದು ಕೂಡ ಒಂದು. ಆಕರ್ಷಕ ಕಾರ್ಯಸ್ಥಳವು ಗಮನ, ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಉಲ್ಲಾಸಮಯವಾಗಿರಿಸುತ್ತದೆ. ನೀವು ಕೂಡಾ ನಿಮ್ಮ ವರ್ಕ್ ಸ್ಟೇಷನ್ ಅನ್ನು ವ್ಯವಸ್ಥಿತವಾಗಿ ವಿನ್ಯಾಸಗೊಳಿಸಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಈ ಟಿಪ್ಸ್‌ಗಳನ್ನು ಅನುಸರಿಸಿ.

ಶಾಂತವಾದ, ಬೆಳಕು ಚೆನ್ನಾಗಿರುವ ಸ್ಥಳವನ್ನು ಆಯ್ಕೆಮಾಡುವುದು ...