Shimoga, ಮಾರ್ಚ್ 21 -- ಚಾರಿತ್ರಿಕ ಹಿನ್ನೆಲೆಯ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹೊಂಬುಜ ಕ್ಷೇತ್ರವಿಂದು ಧಾರ್ಮಿಕ-ಆಧ್ಯಾತ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರ ಎಂಬುದು ಜನಜನಿತವಾಗಿದೆ. ಇಲ್ಲಿ ಈಗ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಜಾತ್ರಾ ಸಡಗರ ಜೋರಾಗಿದೆ.

ಜಾತ್ರಾ ಮಹೋತ್ಸವದ ಎರಡನೇ ದಿನದಂದು ಹೊಂಬುಜ ಮಠದ ಆವರಣದಲ್ಲಿ ಹುಲಿ ವಾಹನೋತ್ಸವವು ಜರುಗಿತು.

ಹುಲಿ ವಾಹನೋತ್ಸವಕ್ಕೆ ವಿಶೇಷ ಅಲಂಕಾರಗಳನ್ನು ಹೊಂಬುಜ ಮಠದಲ್ಲಿ ಮಾಡಲಾಗಿತ್ತು.

ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಜಾತ್ರಾ ಸಡಗರದ ಮೊದಲ ದಿನ ನಾಗ ವಾಹನೋತ್ಸವ ನಡೆಯಿತು. ಈ ವೇಳೆ ವಿಶೇಷ ಪೂಜೆಗಳು ನೆರವೇರಿದವು.

ಪ್ರಸ್ತುತ ಪಟ್ಟಾಚಾರ್ಯರಾದ ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳವರು ನಾಗವಾಹನೋತ್ಸವದ ವೇಳೆ ಪೂಜೆಗಳನ್ನು ಸಲ್ಲಿಸಿದರು.

ಹೊಂಬುಜ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿದಿನ ಉತ್ಸವಗಳು ರಾತ್ರಿ ನಡೆಯಲಿದ್ದು. ಇದಕ್ಕಾಗಿ ಪದ್ಮಾವತಿ ಅಮ್ಮನವರ ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿದೆ.

ಹೊಂ...