ಭಾರತ, ಮಾರ್ಚ್ 12 -- Happy Holi Wishes: ಹೋಳಿ ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಹೋಳಿ ಹಬ್ಬದ ಆಚರಣೆಗೆ ಪೌರಾಣಿಕ ಇತಿಹಾಸವೂ ಇದೆ. ಭಾರತದ ವಿವಿಧ ಭಾಗಗಳಲ್ಲಿ ಒಂದೊಂದು ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿಯನ್ನು ಬಣ್ಣಗಳ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ಬಣ್ಣಗಳೊಂದಿಗೆ ಓಕುಳಿಯಾಡುವುದು ವಿಶೇಷ. ಉತ್ತರ ಭಾರತದಲ್ಲಿ ಹೋಳಿ ಹಬ್ಬದ ಸಂಭ್ರಮ ಬಲು ಜೋರು. ದಕ್ಷಿಣದಲ್ಲೂ ಹಬ್ಬದ ಸಂಭ್ರಮಕ್ಕೇನೂ ಕೊರತೆಯಿಲ್ಲ.

ಈ ವರ್ಷದ ಹೋಳಿ ಹಬ್ಬದ ಹೊಸ್ತಿಲಲ್ಲಿ ನಾವಿದ್ದೇವೆ. ಈಗಾಗಲೇ ಹೋಳಿ ಹಬ್ಬದ ಸಂಭ್ರಮ ದೇಶದೆಲ್ಲೆಡೆ ಶುರುವಾಗಿದೆ. ಈ ಸಮಯದಲ್ಲಿ ಹೋಳಿ ಹಬ್ಬಕ್ಕೆ ನಿಮ್ಮ ಆತ್ಮೀಯರು, ಸ್ನೇಹಿತರು, ಕುಟುಂಬದವರಿಗೆ ವಿಶೇಷವಾಗಿ ವಿಶ್ ಮಾಡಬೇಕು ಅಂತಿದ್ದರೆ ಈ ಸಂದೇಶಗಳು ನಿಮಗೆ ಇಷ್ಟವಾಗಬಹುದು. ಕಾಮನಬಿಲ್ಲಿನಂತೆ ನಿಮ್ಮ ಬದುಕು ಬಣ್ಣಮಯವಾಗಿರಲಿ ಎಂದು ನಿಮ್ಮ ಆತ್ಮೀಯರಿಗೆ ಹೀಗೆಲ್ಲಾ ವಿಶ್ ಮಾಡಬಹುದು ನೋಡಿ.

1. ಪಿಚ್ಕಾರಿಯ ಬಣ್ಣದ ಹೊಳೆ, ಗುಲಾಬಿ ದಳಗಳ ಮಳೆ, ಸಿಹಿ ತಿನಿಸುಗಳ ಮಾಧುರ್ಯ...