ಭಾರತ, ಮಾರ್ಚ್ 13 -- Holi 2025: ಭಾರತದಾದ್ಯಂತ ಹೋಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹೋಳಿ ಎಂದರೆ ಬಣ್ಣಗಳ ಹಬ್ಬ, ಬಣ್ಣಗಳಲ್ಲಿ ಮಿಂದೆದ್ದು ಖುಷಿಪಡುವ ಹಲವರು ಚರ್ಮದ ಕಾಳಜಿಯನ್ನು ಮರಿತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೋಳಿಯಾಡಲು ಬಳಸುವ ಬಣ್ಣಗಳು ರಾಸಾಯನಿಕ ಯುಕ್ತವಾಗಿರುತ್ತವೆ. ಇದರಿಂದ ಬೇಡವೆಂದರೂ ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಇದರೊಂದಿಗೆ ಹೋಳಿಯಾಡುವ ಸಂದರ್ಭ ದೀರ್ಘಕಾಲ ಸೂರ್ಯ ಬಿಸಿಲಿಗೆ ಒಡ್ಡಿಕೊಳ್ಳುವುದು ಕೂಡ ತ್ವಚೆಯ ಅಂದವನ್ನು ಹಾಳುಗೆಡಿಸಬಹುದು. ಇದರಿಂದ ಚರ್ಮ ಒಣಗಬಹುದು, ಕಿರಿಕಿರಿ ಮತ್ತು ಕಾಂತಿ ಕಳೆದುಕೊಳ್ಳುವುದು ಉಂಟಾಗಬಹುದು.
ಹಾಗಂತ ಚಿಂತಿಸುವ ಅಗತ್ಯವಿಲ್ಲ. ಹೋಳಿಯಾಡುವ ಮುನ್ನ ತ್ವಚೆಯ ಆರೈಕೆಗೆ ಸಂಬಂಧಿಸಿ ಈ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ತೊಂದರೆ ತಡೆಯಬಹುದು. ಫೇಸ್ ಆಯಿಲ್‌ಗಳು, ಸನ್‌ಸ್ಕ್ರೀನ್, ಮಾಯಿಶ್ಚರೈಸರ್‌ಗಳು ಮತ್ತು ಸೀರಮ್‌ಗಳೊಂದಿಗೆ ಆರೋಗ್ಯಕರ ಚರ್ಮದ ಆರೈಕೆ ದಿನಚರಿಯು ನಿಮ್ಮ ಚರ್ಮವನ್ನು ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುತ್ತವೆ. ಚರ್ಮದ ಅಂದ,...
Click here to read full article from source
To read the full article or to get the complete feed from this publication, please
Contact Us.