ಭಾರತ, ಮಾರ್ಚ್ 14 -- ಹೋಳಿ ಬಣ್ಣಗಳ ಹಬ್ಬ. ಬಣ್ಣಗಳನ್ನು ಎರಚುತ್ತಾ ಸಂಭ್ರಮಿಸುವುದು ಈ ಹಬ್ಬದ ವಿಶೇಷ. ಹೋಳಿ ಸಂಭ್ರಮ ಮುಗಿದ ಮೇಲೆ ಒಂದಿಷ್ಟು ತ್ರಾಸು ಎನ್ನಿಸುವ ಕೆಲಸ ಇರುವುದು ಸುಳ್ಳಲ್ಲ. ಯಾಕೆಂದರೆ ಹೋಳಿ ಬಣ್ಣಗಳನ್ನು ಸ್ವಚ್ಛ ಮಾಡುವುದು ಸವಾಲು ಎನ್ನಿಸುತ್ತದೆ. ಮನೆಯ ಹೆಂಗಸರಿಗಂತೂ ಅಂಗಳದಿಂದ ಹಿಡಿದು ಬಟ್ಟೆವರೆಗೆ ಎಲ್ಲವನ್ನೂ ಸ್ವಚ್ಛ ಮಾಡುವುದರಲ್ಲೇ ಸಾಕು ಸಾಕಾಗಿ ಬಿಡುತ್ತದೆ.

ಸಾಮಾನ್ಯ ಬಟ್ಟೆಗಳ ಮೇಲೆ ಬಣ್ಣ ಬಿದ್ದರೆ ಏನೂ ಅನ್ನಿಸುವುದಿಲ್ಲ, ಆದರೆ ದುಬಾರಿ ಬಟ್ಟೆಗಳ ಮೇಲೆ ಬಣ್ಣ ಬಿದ್ದರೆ ಅದನ್ನು ತೆಗೆಯುವುದು ಕಷ್ಟ, ಮಾತ್ರವಲ್ಲ ಇದರಿಂದ ಮನಸ್ಸಿಗೂ ಬೇಸರವಾಗುತ್ತದೆ. ದುಬಾರಿ ಬಟ್ಟೆಗಳನ್ನು ಎಸೆಯಲು ಕೂಡ ಮನಸ್ಸಾಗುವುದಿಲ್ಲ. ಹಾಗಂತ ಅದನ್ನು ಬಳಸಲು ಬರುವುದಿಲ್ಲ. ಪ್ರತಿ ಬಾರಿ ಹೋಳಿ ಬಂದಾಗಲೂ ಇದೇ ಕಥೆ ಆಗಿರುತ್ತದೆ. ಆದರೆ ಹೋಳಿ ಸಮಯದಲ್ಲಿ ಬಣ್ಣಗಳಿಂದ ಬಟ್ಟೆಯ ಮೇಲಾಗುವ ಕಲೆಗಳನ್ನು ಸುಲಭವಾಗಿ ತೆಗೆದುಹಾಕಲು ಇಲ್ಲೊಂದಿಷ್ಟು ಸಿಂಪಲ್ ಟ್ರಿಕ್ಸ್‌ಗಳಿವೆ. ಈ ಟ್ರಿಕ್ಸ್‌ಗಳನ್ನು ನೀವು ಟ್ರೈ ಮಾಡಿ ನೋಡಿ.

ಬಟ...