Navalgund, ಮಾರ್ಚ್ 8 -- ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ಸಾಮರಸ್ಯದ ಊರು. ವೈಶಿಷ್ಟ್ಯಪೂರ್ಣವಾಗಿ ಹೋಳಿ ಹುಣ್ಣೆಮೆಯನ್ನು ಆಚರಣೆ ಮಾಡುವ ನವಲಗುಂದ ಶ್ರೀ ರಾಮಲಿಂಗ ಕಾಮಣ್ಣನು ಇಷ್ಟಾರ್ಥ ಸಿದ್ಧಿ ಪುರುಷನಾಗಿ ಪೂಜೆಗೊಳ್ಳುತ್ತಿರುವ ಕಾಮದೇವನಾಗಿದ್ದಾನೆ. ಹಿಂದು-ಮುಸ್ಲಿಂ ಬಾಂಧವರು ಸೇರಿಕೊಂಡು ಈ ಹಬ್ಬವನ್ನು ಸೌಹಾರ್ದಯುತವಾಗಿ ದಶಕಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿಯು ಮಾರ್ಚ್‌ 11ರಿಂದ ನವಲಗುಂದದಲ್ಲಿ ಹೋಳಿ ಹಬ್ಬದ ಸಡಗರ ಶುರುವಾಗಿ ಕೆಲ ದಿನ ನಡೆಯುತ್ತದೆ. ಇದಕ್ಕಾಗಿ ಈಗಾಗಲೇ ನವಲಗುಂದದಲ್ಲಿ ಸಿದ್ದತೆಗಳು ನಡೆದಿವೆ. ಹೋಳಿಯನ್ನು ಆಡುತ್ತಾ ಊರಿನ ಬೀದಿ ಬೀದಿಗಳಲ್ಲಿ ಖುಷಿಪಡುತ್ತಾರೆ. ಈಗಾಗಲೇ ಸಮಿತಿಗಳನ್ನೂ ರಚಿಸಿ ಯಾವುದೇ ಗೊಂದಲಕ್ಕೂ ಅವಕಾಶ ನೀಡದೇ ಹೋಳಿ ಆಚರಣೆ ಮಾಡಲು ಜನ ಅಣಿಯಾಗುತ್ತಿದ್ದಾರೆ.

ಧಾರವಾಡದಿಂದ ವಿಜಯಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ಬರುವ ನವಲಗುಂದ ಪಟ್ಟಣದ ಪ್ರತಿಯೊಂದು ಓಣಿಯಲ್ಲಿ ಪ್ರತಿಷ್ಠಾಪಿಸಲಾದ ಕಾಮಣ್ಣಗಳಲ್ಲಿ ಇಷ್ಟಾರ್ಥ ಪೂರೈಸಿಕೊಳ್ಳಲು ಮಹಿಳೆಯರು ಉಪವಾಸ ವ್ರತ ಮಾಡಿ ಭಕ್...